ಮೇ 11 ರೊಳಗೆ ಕಡ್ಡಾಯವಾಗಿ SIR Mapping ಪೂರ್ಣಗೊಳಿಸಿ- ಸಂಶದ್ ಅಬೂಬಕ್ಕರ್ ಕರೆ



ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ SIR Mapping (Special Intensive Revision Mapping) ಪ್ರಕ್ರಿಯೆಯನ್ನು ಪ್ರತಿಯೊಬ್ಬ ಮತದಾರರು ಗಂಭೀರವಾಗಿ ಪರಿಗಣಿಸಿ ಮೇ 11 ರೊಳಗೆ ಕಡ್ಡಾಯವಾಗಿ Mapping ಪೂರ್ಣಗೊಳಿಸಬೇಕು ಎಂದು SDPI ನಿಕಟ ಪೂರ್ವ ಕಾರ್ಪೊರೇಟರ್, ಮಂಗಳೂರು ಮಹಾನಗರ ಪಾಲಿಕೆ 5ನೇ ವಾರ್ಡ್‌ನ ಸಂಶದ್ ಅಬೂಬಕ್ಕರ್ ಕರೆ ನೀಡಿದ್ದಾರೆ.

ಮತದಾರರ ಪಟ್ಟಿಯನ್ನು ನವೀಕರಿಸುವ ಉದ್ದೇಶದಿಂದ ನಡೆಯುತ್ತಿರುವ ಈ Mapping ಪ್ರಕ್ರಿಯೆಯಲ್ಲಿ ಹಲವರು ಇನ್ನೂ ಭಾಗವಹಿಸದೇ ಉಳಿದಿದ್ದು, ಅಂತಹವರು ತಕ್ಷಣ ಜಾಗ್ರತೆ ವಹಿಸಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಮಾಹಿತಿಯನ್ನು ಪರಿಶೀಲಿಸಿ Mapping ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಮತದಾನವು ಪ್ರತಿಯೊಬ್ಬ ನಾಗರಿಕರ ಸಂವಿಧಾನಬದ್ಧ ಹಕ್ಕಾಗಿದ್ದು, ಸಮಯಕ್ಕೆ ಸರಿಯಾಗಿ Mapping ಮಾಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಕೈ ತಪ್ಪುವ ಸಾಧ್ಯತೆಗಳಿವೆ. ಆದ್ದರಿಂದ ಮನೆಮನೆಗಳಿಗೆ ಭೇಟಿ ನೀಡುವ ಅಧಿಕಾರಿಗಳಿಗೆ ಸಹಕರಿಸಿ, ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯೂ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ವಿಶೇಷವಾಗಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಯುವ ಮತದಾರರು ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸದೆ ತಕ್ಷಣ ಪೂರ್ಣಗೊಳಿಸುವ ಮೂಲಕ ತಮ್ಮ ಮತದಾನದ ಹಕ್ಕನ್ನು ಸುರಕ್ಷಿತಗೊಳಿಸಬೇಕೆಂದು ಸಂಶದ್ ಅಬೂಬಕ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.