ಸಮಗ್ರ ಮಹಿಳಾ ಮೀಸಲಾತಿಯನ್ನು ಕೋರಿದ ವಿಮ್, ತೀರಸ್ಕೃತ ಮಸೂದೆಗೆ ಸ್ವಾಗತ

ಯಾಸ್ಮಿನ್ ಇಸ್ಲಾಮ್

ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಸಂಸತ್ತಿನಲ್ಲಿ ಸಂವಿಧಾನ (131ನೇ ತಿದ್ದುಪಡಿ ) ಮಸೂದೆ, 2026ಯ  ತಿರಸ್ಕಾರವನ್ನು ಸ್ವಾಗತಿಸಿದೆ. ಪ್ರಸ್ತಾಪಿತ ಕ್ಷೇತ್ರ ಪುನರ್ವಿಂಗಡನೆ  ಸಮಾನ ಪ್ರತಿನಿಧಿತ್ವದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ  ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಹೇಳಿದರು. 

ಈ ಕ್ರಮವನ್ನು ರಾಜಕೀಯ ಪ್ರೇರಿತ ಎಂದು WIM ಪರಿಗಣಿಸಿದ್ದು, ಮುಂಬರುವ ಚುನಾವಣೆಗಳ ಮುನ್ನ ಜನರ ಗ್ರಹಿಕೆಯನ್ನು ರೂಪಿಸಲು ಮತ್ತು ಮಹಿಳಾ ಹಕ್ಕುಗಳ ರಕ್ಷಕ ಎಂದು ಆಡಳಿತ ವ್ಯವಸ್ಥೆಯನ್ನು ಬಿಂಬಿಸಲು ಇದನ್ನು ಬಳಸಲಾಗಿದೆ ಎಂದು ಆರೋಪಿಸಿದರು.ಆದರೆ  ಇಲ್ಲಿ ನಿಜವಾದ ಸಬಲೀಕರಣದ ಪ್ರಶ್ನೆಯನ್ನು ಪರಿಹರಿಸಲಾಗಿಲ್ಲ ಎಂದು  ಅವರು ಹೇಳಿದರು.

ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡನೆ ಅಥವಾ ಸ್ಥಾನ ವಿಸ್ತರಣೆಗೆ ಹೊಂದಿಸಿಕೊಳ್ಳುವ  ಮೂಲಕ ಅನಿಶ್ಚಿತತೆಗೆ ಅಥವಾ ಪ್ರಕ್ರಿಯಾತ್ಮಕ ವಿಳಂಬಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು WIM ಒತ್ತಿ ಹೇಳಿದೆ. ಮಹಿಳಾ ಪ್ರತಿನಿಧಿತ್ವದ ದೀರ್ಘಕಾಲದ ಬೇಡಿಕೆಯನ್ನು ಯಾವುದೇ ಷರತ್ತುಗಳಿಲ್ಲದೆ, ತಕ್ಷಣ ಮತ್ತು ಸ್ವತಂತ್ರವಾಗಿ ಮುಂದುವರಿಸಬೇಕು.

ಭಾರತದ ಸಾಮಾಜಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ, ಅರ್ಥಪೂರ್ಣ ಪ್ರತಿನಿಧಿತ್ವವನ್ನು ಖಚಿತಪಡಿಸುವ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಲು WIM ಒತ್ತಾಯಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.