ಹೃದಯಾಘಾತ: ಲೆಕ್ಕ ಪರಿಶೋಧಕ ಕುಕ್ಕಿಕಟ್ಟೆ ದೀಪಕ್ ಶೆಣೈ ನಿಧನ



ಉಡುಪಿ;  ಕುಕ್ಕಿಕಟ್ಟೆಯ ದಿ. ಮರ್ತಪ್ಪ ಶೆಣೈ ಅವರ ಪುತ್ರ, ಲೆಕ್ಕ ಪರಿಶೋಧಕ ದೀಪಕ್ ಶೆಣೈ ಅವರು ಇಂದು ಹೃದಯಾಘಾತದಿಂದ ನಿಧನರಾದರು.

ಅವರಿಗೆ 47 ವರ್ಷ ವಯಸ್ಸಾಗಿತ್ತು. ಅವರು ಮಂಜೇಶ್ವರದ ಶ್ರೀ ಅನಂತೇಶ್ವರ ದೇವಸ್ಥಾನದ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.