ಮಲ್ಪೆ: ಮೀನು ಏಲಂ ಮಾಡುತ್ತಿದ್ದ ವ್ಯಕ್ತಿಗೆ ಹಲ್ಲೆ- ಪ್ರಕರಣ ದಾಖಲು : ವಿವಿಧ ಸಂಘಟನೆಗಳಿಂದ ಹಲ್ಲೆಗೆ ಖಂಡನೆ



ಮಲ್ಪೆ: ಮಲ್ಪೆ ಬಂದರಿನಲ್ಲಿ ಮೀನು ಏಲಂ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಗುರುವಾರ ಬೆಳಗ್ಗೆ 7:30 ಸುಮಾರಿಗೆ ನಡೆದಿದೆ.

ಹಲ್ಲೆಗೆ ಒಳಗಾದವರನ್ನು ಅಂಬಲಪಾಡಿಯ ಶೇಕ್ ಅಯ್ಯುಬ್(52) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇವರು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರು ಮಲ್ಪೆಯಲ್ಲಿ ಮೀನು ಏಲಂ ಮಾಡುವ ಕೆಲಸ ಮಾಡಿಕೊಂಡಿದ್ದು ಇಂದು ಬೆಳಿಗ್ಗೆ ಬಾಲಕನೋರ್ವ ಆಯುಬ್‌ ಅವರಿಗೆ ಮೀನನ್ನು ತಂದು ಕೊಟ್ಟಿದ್ದನು. ಅದರಂತೆ ಅವರು ಏಲಂ ಮಾಡುತ್ತಿರುವಾಗ ಅಲ್ಲಿಗೆ ಬಂದ ಮಿಥುನ್ ಕರ್ಕೇರಾ, ನೀನು ಯಾಕೆ ಮೀನು ತಂದಿ ? ಯಾಕೆ ಏಲಂ ಮಾಡುತ್ತಿದ್ದಿ ಎಂದು ಹೇಳಿ ಕೈಯಿಂದ ಮುಖ, ಕಣ್ಣು ಹೊಟ್ಟೆ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

ಅಲ್ಲದೆ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದ ಎಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.