ಉಡುಪಿ:ಅಧಿಕ ಲಾಭಾಂಶದ ಆಮಿಷ ನೀಡಿ ವ್ಯಕ್ತಿಗೆ 14 ಲಕ್ಷ ರೂ. ವಂಚನೆ

ಸಾಂದರ್ಭಿಕ ಚಿತ್ರ

ಉಡುಪಿ: ಹೂಡಿಕೆಯಿಂದ ಅಧಿಕ ಲಾಭಾಂಶ ಗಳಿಸುವ ಆಸೆಯಿಂದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ.ಕಳೆದುಕೊಂಡ ಘಟನೆ ನಡೆದಿದೆ.

ಸುರತ್ಕಲ್ ನಿವಾಸಿ ಇರ್ಫಾನ್ ಅವರು ಉಡುಪಿಯ ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಹೊಂದಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರಿಗೆ ವಿವಿಧ ಆನ್ ಲೈನ್ ಫೋನ್ ಕರೆಗಳು ಬಂದಿದ್ದವು. ಅದರಲ್ಲಿ ವಿಶಾಲ್ ರಾವ್ ಎಂಬವರು ಇನ್ವೆಸ್ಟ್ ಮೆಂಟ್ ಬಗ್ಗೆ ಇರ್ಫಾನ್ ಅವರಿಗೆ ತಿಳಿಸಿದ್ದರು. ಅದರಂತೆ ಲಾಗಿನ್ ಐಡಿ ಸೃಷ್ಟಿಸಿ ವಿವಿಧ ಖಾತೆಗಳಿಗೆ ಹಣ ಹಾಕುವಂತೆ ತಿಳಿಸಿದ್ದರು. ಅದರಂತೆ ಇರ್ಫಾನ್ ಅವರು ಆ.3ರಿಂದ ನ.29ರವರೆಗೆ ಒಟ್ಟು 14,07,025 ರೂ.ಗಳನ್ನು ಆರೋಪಿ ಸೂಚಿಸಿದ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಆದರೆ ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.