ಉಡುಪಿ:- ಮಾನಸಿಕ ಅಸ್ವಸ್ಥನೋರ್ವ ಖಾಸಗಿ ಜಾಗಕ್ಕೆ ಬೆಂಕಿಹಚ್ಚಿದ್ದು ಇದರಿಂದ ಭಾರಿ ಅನಾಹುತ ತಪ್ಪಿದ ಘಟನೆ ಇಂದು ಮದ್ಯಹ್ನ ವೇಳೆ ಸಂಭವಿಸಿದೆ.
ಶ್ರೀ ಕೃಷ್ಣಮಠದ ಹಿಂಭಾಗದ ಗೋವಿಂದ ಪುಷ್ಕರಣಿ ಮಾರ್ಗದಲ್ಲಿರುವ ಖಾಸಗಿ ಜಾಗಕ್ಕೆ ಮಾನಸಿಕ ಅಸ್ವಸ್ಥನೋರ್ವ ಬೆಂಕಿಹಚ್ಚಿದ್ದು ಇದರ ಪರಿಣಾಮವಾಗಿ ಬೆಂಕಿಯು ಖಾಲಿ ಜಾಗಕ್ಕೆ ವಿಸ್ತರಿಸಿದ್ದು ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ.
ಖಾಸಗಿ ಜಾಗದ ಸಮೀಪದಲ್ಲಿ ಶಾಲೆ ಮತ್ತು ಮನೆಗಳಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದು ಅಗ್ನಿಶಾಮಕ ದಳ ,ಸಮಾಜ ಸೇವಕಕರ ನೆರವಿನಿಂದ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
