ಉಡುಪಿ: ಮಂಗಳೂರಲ್ಲಿ ಬುರುಡೆ ಗ್ಯಾಂಗ್ ,ಕಾರ್ಕಳದಲ್ಲಿ ಪೈಬರ್ ಗ್ಯಾಂಗ್ : ಸುನಿಲ್ ಕುಮಾರ್ ಲೇವಡಿ !

ಸುನಿಲ್ ಕುಮಾರ್

ಉಡುಪಿ: ಕಾರ್ಕಳದ ಬೈಲೂರಿನಲ್ಲಿರುವ ಪರಶುರಾಮ ಥೀಮ್ ಪಾರ್ಕ್ ನಲ್ಲಿ ತಾಮ್ರದ ಮೇಲ್ಚಾವಣಿ ಕಳ್ಳತನವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ ಪ್ರತ್ಯಾರೋಪಕ್ಕೆ ಇಳಿದಿದೆ. ಪರಶುರಾಮ ಥೀಮ್ ಪಾರ್ಕ್ ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸುನಿಲ್ ಕುಮಾರ್, ಇದೊಂದು ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕಿದ್ದ ಉತ್ತಮ ತಾಣವಾಗಿತ್ತು.ಆದರೆ  ಕೆಲವು ಕಾಂಗ್ರೆಸ್‌ ನಾಯಕರ ದ್ವೇಷ ರಾಜಕಾರಣಿಕ್ಕೆ ಬಲಿಯಾಗಿದೆ. 2023 ರಿಂದ ಇಲ್ಲಿ ಪ್ರವಾಸಿಗರಿಗೆ ನಿಷೇಧ ಇದೆ. ಇದು ಪ್ರವಾಸೀ ತಾಣವಾಗಿ  ಮಾರ್ಪಾಡಾಗಬೇಕಿತ್ತು , ಆದರೆ ಈಗ ಇಲ್ಲಿ ಜನರೇ ಇಲ್ಲ. ಇದಕ್ಕೆ ಕಾಂಗ್ರೆಸ್‌ ನ ದ್ವೇಷ ರಾಜಕಾರಣವೇ ಕಾರಣ. ಕಾರ್ಕಳದ ಕೆಲವು ಕಾಂಗ್ರೆಸ್ ನಾಯಕರುಗಳು ಇದನ್ನು ಪಾಲು ಬೀಳುವಂತೆ ಮಾಡಿದ್ದಾರೆ. ಮಂಗಳೂರಿನಲ್ಲಿ ಬುರುಡೆ ಗ್ಯಾಂಗ್ ಇದ್ದಹಾಗೆ ಇಲ್ಲೊಂದು ಫೈಬರ್ ಗ್ಯಾಂಗ್ ಇದೆ ಎಂದು ಸುನಿಲ್ ಕುಮಾರ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ  ದಾಖಲೆ ನಿರ್ಮಿಸುತ್ತಿದ್ದಾರೆ.ಇವತ್ತು ದೇವರಾಜ ಅರಸು ದಾಖಲೆ ಮುರಿಯುತ್ತಿದ್ದು ವಿಪಕ್ಷ ಬಿಜೆಪಿ ಸಿಎಂಗೆ ಟಾಂಗ್ ನೀಡಿದೆ.

ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ಮುಖಂಡ ಶಾಸಕ ಸುನಿಲ್ ಕುಮಾರ್ , ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋ ಬಗ್ಗೆ ಕಾಲಹರಣ ಮಾಡುತ್ತಿದ್ದಾರೆ.ಎಷ್ಟು ಅವಧಿ ಇದ್ದೇವೆ ಅನ್ನೋದು ದಾಖಲೆ ಅಲ್ಲ.ಹೇಗೆ ಅಧಿಕಾರದಲ್ಲಿ ಇದ್ದೆವು ಅನ್ನೋದು ದಾಖಲೆಯಾಗಬೇಕು.

ಜನರು ನೆನಪಿಡಬೇಕಾದ ಕೆಲಸ ಮಾಡುವುದು ದಾಖಲೆ.ಒಂದು ವರ್ಷ ಎರಡು ವರ್ಷ ಅಧಿಕಾರ ಮಾಡಿದವರು ಕೂಡ ಜನರಿಗೆ ಶಾಶ್ವತ ನೆನಪಿರುವ ಕೆಲಸ ಮಾಡಿದ್ದಾರೆ.ಎಷ್ಟು ದಿನ ಅಧಿಕಾರದಲ್ಲಿ ಇದ್ದೆ ಅನ್ನೋದು ಮುಖ್ಯವಲ್ಲ.ಮುಖ್ಯಮಂತ್ರಿಗಳು ಬೇಕಾದರೆ ದಾಖಲೆ ಸೇರಿಕೊಳ್ಳಲಿ.ಎಷ್ಟು ಹಿಂದೂ ಕಾರ್ಯಕರ್ತರ ಎಷ್ಟು ರೈತರ ಹತ್ಯೆ ಆಯ್ತು?ಎಷ್ಟು ಸಹಸ್ರಕೋಟಿಯ ಭ್ರಷ್ಟಾಚಾರ ನಡೆಯಿತು ?ಇದಕ್ಕೆ ಮೊದಲು ಮುಖ್ಯಮಂತ್ರಿಗಳು ಉತ್ತರ ಕೊಡಲಿ ಎಂದು ಹೇಳಿದ್ದಾರೆ.