![]() |
| ಸ್ವರ್ಣಾ ನದಿ |
ಉಡುಪಿ: ಉಡುಪಿ ಸಮೀಪದ ಕಲ್ಯಾಣಪುರ ಬಳಿಯ ಸ್ವರ್ಣಾ ನದಿಯಲ್ಲಿ ಜಿಗಿದು ಆತ್ಮಹತ್ಯೆಗೈಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಇಂದು ನಡೆದಿದೆ.
ಈ ವ್ಯಕ್ತಿ ಆತ್ಮಹತ್ಯೆ ಮಾಡಲು ಬಂದಿದ್ದನ್ನು ದೋಣಿಯ ಮೂಲಕ ಮೀನು ಹಿಡಿಯುವವರು ಗಮನಿಸಿ ರಕ್ಷಿಸಿದರು. ಬಳಿಕ ಸ್ಥಳೀಯ ಮಾಜಿ ನಗರಸಭಾ ಸದಸ್ಯ ಚಿನ್ಮಯ ಮೂರ್ತಿಯವರಿಂದ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ಥಳಕ್ಕೆ ಆಗಮಿಸಿ ರಕ್ಷಿಸಲ್ಪಟ್ಟ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದ್ದು, ನಂತರ ಅಂಬಲಪಾಡಿಯಲ್ಲಿರುವ ಆತನ ಮನೆಗೆ ಹಸ್ತಾಂತರಿಸಿದ್ದಾರೆ.
