ಉಡುಪಿ: ಪರ್ಯಾಯ ಅನ್ನುವುದು ಒಂದು ಪುರೋಹಿತಶಾಹಿ ಖಾಸಗೀ ಮಠದ ಪೂಜೆಯ ವರ್ಗಾವಣೆಯ ಸಮಾರಂಭ. ಎರಡು ವರ್ಷಕ್ಕೊಮ್ಮೆ ಉಡುಪಿ ಶ್ರೀಕ್ರಷ್ಣ ಮಠದ ಉಸ್ತುವಾರಿ ಮತ್ತು ವಿವಿಧ ಸೇವೆಯನ್ನು ಗೖಯುವ ಜವಾಬ್ದಾರಿಯನ್ನು ನಿರ್ಧರಿಸುವ ಮಾಧ್ವ ಬ್ರಾಹ್ಮಣರ ಖಾಸಗಿ ಉತ್ಸವವೇ ಪರ್ಯಾಯ ಮಹೋತ್ಸವ.ಈ ಖಾಸಗಿ ಕಾರ್ಯಕ್ರಮಕ್ಕೂ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅಷ್ಟಕ್ಕೂ ಇದು ಸರಕಾರಿ ಕಾರ್ಯಕ್ರಮವಲ್ಲಾ.ಅಷ್ಟ ಮಠಗಳ ಪೂಜೆಯನ್ನು ಒಂದು ಮಠದಿಂದ ಇನ್ನೊಂದು ಮಠಕ್ಕೆ ವರ್ಗಾಯಿಸುವ ಪುರೋಹಿತಶಾಹಿ ಬ್ರಾಹ್ಮಣರ ಖಾಸಗೀ ವ್ಯವಸ್ಥೆ.
ಇಂತಹ ಪುರೋಹಿತಶಾಹಿ ಹಿಂದೂ ಕಾರ್ಯಕ್ರಮದಲ್ಲಿ ಸಂವಿಧಾನದ ಅಡಿಯಲ್ಲಿ ಸೇವೆ ಮಾಡುವ , ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕಾಗಿರುವ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು ಒಬ್ಬ ಹಾಜಬ್ಬ ಹಸನಬ್ಬ ಬೆತ್ತಲೆ ಪ್ರಕರಣ ರುವಾರಿ, ಹಿಜಾಬ್ ಪ್ರಕರಣದಲ್ಲಿ ದೇಶಾದ್ಯಂತ ಸುಧ್ಧಿಯಾದ ಉಡುಪಿ ಹಿಂದುತ್ವವಾದಿ ಶಾಸಕ ಯಶಪಾಲ್ ಸುವರ್ಣ ಕೊಟ್ಟ ಆರ್ ಎಸ್ ಎಸ್ ಧ್ವಜವನ್ನು ಪರ್ಯಾಯದ ಮೆರವಣಿಗೆಯ ಸಂದರ್ಭದಲ್ಲಿ ಜೋಡುಕಟ್ಟೆಯಲ್ಲಿ ಸಾರ್ವಜನಿಕವಾಗಿ ಎತ್ತಿಹಿಡಿದು ಪ್ರದರ್ಶಿಸಿ ಹಿಂದುತ್ವವಾದವನ್ನು ಪ್ರಧರ್ಶಿಸಿದ್ದಾರೆ. ಇದು ಅಕ್ಷಮ್ಯ .
ಸಣ್ಣ ಪುಟ್ಟ ಬೇರೆ ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತ್ರಕ್ಕೆ ಸರಕಾರಿ ನೌಕರರನ್ನು ಅಮಾನತು ಮಾಡುವ ಜಿಲ್ಲಾಡಳಿತ , ಸರಕಾರಿ ನೌಕರರು ಮುಖ್ಯಮಂತ್ರಿಯವರಿಗೆ ಮನವಿ ಕೊಟ್ಟ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿದೆ ಎಂಬ ಕಾರಣಕ್ಕೆ ಅಮಾನತು ಮಾಡುವ ಜಿಲ್ಲಾಡಳಿತ ಒಂದು ಹಿಂದುತ್ವವಾದಿ ಕೋಮಿನ ಧ್ವಜವನ್ನು ಪ್ರಧರ್ಶಿಸುವುದು ಖಂಡನೀಯ.
ಈಗಾಗಲೇ ಜಿಲ್ಲಾಧಿಕಾರಿ ಒಂದು ಹಾರಿಕೆಯ ಸ್ಪಷ್ಟನೆ ನೀಡಿದ್ದು ಅದು ಸಮಂಜಸವಲ್ಲ. ಹಿಂದೆ ಯಾವುದೇ ಜಿಲ್ಲಾಧಿಕಾರಿಯವರೂ ಕೇವಲ ಒಂದು ಕೋಮಿನ ಬಗ್ಗೆ ಪರವಾಗಿದ್ದ ಉದಾಹರಣೆಗಳಿಲ್ಲ. ಅಷ್ಟಕ್ಕೂ ಜಿಲ್ಲಾಡಳಿತಕ್ಕೆ ಒಂದು ಜಿಲ್ಲೆಯ ಪ್ರಮುಖ ಖಾಸಗಿ ಕಾರ್ಯಕ್ರಮವನ್ನು ಯಾವುದೇ ಗೊಂದಲ , ಗಲಭೆಗಳಾಗದದಂತೆ ನಡೆಸುವ ಜವಾಬ್ದಾರಿ ಇರತ್ತದೆಯೇ ಹೊರತು ಸ್ವತಃ ಜಿಲ್ಲಾಧಿಕಾರಿಯೇ ಆರ್ ಎಸ್ ಎಸ್ ಅಥವಾ ಭಗವಾಧ್ವಜವನ್ನು ಬೀಸಿ ಪುರೋಹಿತಶಾಹಿಗಳ ಕಾರ್ಯಕ್ರಮಕ್ಕೆ ಚಾಲನೆ ಕೊಡುವುದು ಈ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಈ ಕೂಡಲೇ ಜಿಲ್ಲಾಧಿಕಾರಿ ಸ್ವರೂಪ ಅವರನ್ನು ಅಮಾನತು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿಯವರು ಆಗ್ರಹಿಸಿದ್ದಾರೆ.
