![]() |
| ಸಾಂದರ್ಭಿಕ ಚಿತ್ರ |
ಉಡುಪಿ: ಇಂಜಿನಿಯರ್ ಒಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಅವರಿಗೆ ತಿಳಿಯದೇ ಅಕ್ರಮವಾಗಿ ವರ್ಗಾವಣೆಗೊಂಡ ಘಟನೆ ನಡೆದಿದೆ.
ದೊಡ್ಡಣಗುಡ್ಡೆ ನಿವಾಸಿ, ಸಿವಿಲ್ ಎಂಜಿನಿಯರ್ ಚೇತನ್ ಕುಮಾರ್ ಅವರು ಮಣಿಪಾಲದ ಬ್ಯಾಂಕ್ ಆಫ್ ಬರೋಡಾ ಹಾಗೂ ಕುಂಜಿಬೆಟ್ಟುವಿನ ಕರ್ಣಾಟಕ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದರು. ಈ ಎರಡು ಬ್ಯಾಂಕ್ ಗಳಿಗೂ ಅವರ ಮೊಬೈಲ್ ಸಂಖ್ಯೆ ನೀಡಿದ್ದರು. ಜನವರಿ 20ರಂದು ರಾತ್ರಿ ಸುಮಾರು 7.30ರಿಂದ ಹಂತ ಹಂತವಾಗಿ ಬರೋಡಾ ಬ್ಯಾಂಕ್ ಆಕೌಂಟ್ ನಿಂದ 4,39,500 . ರೂ. ಹಾಗೂ ಕರ್ಣಾಟಕ ಬ್ಯಾಂಕ್ ಅಕೌಂಟ್ ನಿಂದ 1,96,400 ರೂ. ಸಹಿತ ಒಟ್ಟು 6,35,900 ರೂ.ಅವರಿಗೆ ತಿಳಿಯದೆ ಅಕೌಂಟ್ ನಿಂದ ಯುಪಿಐ ಮುಖಾಂತರ ವರ್ಗಾವಣೆಯಾಗಿದೆ. ಈ ಬಗ್ಗೆ ಅವರಿಗೆ ತಮ್ಮ ಮೊಬೈಲ್ ಗೆ ಬ್ಯಾಂಕ್ ನಿಂದ ಬಂದ ಎಸ್.ಎಂ.ಎಸ್.ನಿಂದ ತಿಳಿದಿದೆ. ಈ ಬಗ್ಗೆ ಅವರು ಸೆನ್ ಠಾಣೆಯಲ್ಲಿ ದೂರು ನೀಡದ್ದಾರೆ.
