![]() |
| ಪವನ್ ಕಲ್ಯಾಣ್ ಜೊತೆಗೆ ಕೋಟ |
ಉಡುಪಿ: ಮಾಧ್ಯಮದ ತಪ್ಪು ಗ್ರಹಿಕೆಯಿಂದ ಸುಳ್ಳು ಸುದ್ಧಿ ಪ್ರಸಾರ ಆಗಿದೆ. ಉಡುಪಿ ಶ್ರೀಕೃಷ್ಣ ಮಠದ ಕಾರ್ಯಕ್ರಮಕ್ಕೆ ನಾನು ಆಂದ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ರವರ ಜೊತೆಗೆ ಭಾಗವಹಿಸಬೇಕಿತ್ತು. ಆದರೆ ಅನ್ಯ ಕಾರ್ಯಕ್ರಮದ ನಿಮಿತ್ತ ಬೇರೆಡೆ ತೆರಳಬೇಕಾದ ಅನಿವಾರ್ಯತೆಯಿಂದ ಪವನ್ ಕಲ್ಯಾಣ್ ರವರಿಗೆ ಸ್ವಾಗತ ಕೋರಲು ಅವರಿದ್ದ ವಿಶ್ರಾಂತಿ ಕೊಠಡಿಗೆ ತೆರಳಿದ್ದೆ. ಈ ಸಂದರ್ಭದಲ್ಲಿ ಅವರು ಕಾರ್ಯಕ್ರಮಕ್ಕೆ ತೆರಳಲು ತಮ್ಮ ಕೊಠಡಿಯಲ್ಲಿ ತಯಾರಾಗುತ್ತಿದ್ದಾರೆ ಎಂದು ಅವರ ಸಿಬ್ಬಂದಿಗಳು ತಿಳಿಸಿದ್ದರಿಂದ ನಾನು, ಹಿರಿಯರಾದ ಕಲ್ಲಡ್ಕ ಡಾ.ಪ್ರಭಾಕರ ಭಟ್ ರವರು, ಸೇರಿದಂತೆ ಹಲವರು ಸುಮಾರು ಆರೇಳು ನಿಮಿಷಗಳ ಕಾಲ ಅಲ್ಲಿಯೇ ಕುಳಿತು ಮಾತುಕತೆ ನಡೆಸುತ್ತಿದ್ದೆವು. ನಂತರ ಬಂದ ಪವನ್ ಕಲ್ಯಾಣ್ ರವರು ತಮ್ಮ ಜೊತೆಗೆ ಮಾತುಕತೆ ನಡೆಸಿ, ಅವರಿಗೆ ಸ್ವಾಗತ ಕೋರಿ ಹೊರಟೆವು. ಈ ಮಧ್ಯೆ ಒಟ್ಟಾಗಿ ಸುದ್ಧಿಗಾರರನ್ನೂ ಎದುರಿಸಿದೆವು.
ನನ್ನನ್ನು ಆಂದ್ರಪ್ರದೇಶದ ಪೊಲೀಸರು ತಡೆದರು ಎಂಬ ಸುದ್ಧಿ ಸತ್ಯಕ್ಕೆ ದೂರವಾಗಿದ್ದಾಗಿದೆ. ಅಂತಹಾ ಯಾವುದೇ ಘಟನೆಗಳು ಅಲ್ಲಿ ನಡೆದಿಲ್ಲ ಎಂದು ಸಂಸದ ಕೋಟ ಫೇಸ್ ಬುಕ್ ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
