![]() |
| ಸಾಂದರ್ಭಿಕ ಚಿತ್ರ |
ಕಾರ್ಕಳ: ಪತಿ , ಪತ್ನಿಗೆ ಹಲ್ಲೆ ನಡೆಸಿ ಬಳಿಕ ತಾನು ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 1ರಂದು ಮಧ್ಯಾಹ್ನ ವೇಳೆ ನಿಟ್ಟೆಯಲ್ಲಿ ಸಂಭವಿಸಿದೆ.
ನಿಟ್ಟೆ ಗ್ರಾಮದ ಸದಾನಂದ ಶೆಟ್ಟಿ (68) ಮೃತಪಟ್ಟವರು. ಹಲ್ಲೆಯಿಂದ ಗಾಯಗೊಂಡ ಪತ್ನಿ ಶಕುಂತಳಾ ಶೆಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತಿ ಮತ್ತು ಪತ್ನಿಯ ಮಧ್ಯೆ ಯಾವುದೋ ಕಾರಣಕ್ಕಾಗಿ ಜಗಳ ಆಗಿದ್ದು ಸದಾನಂದ ಅವರು ಶಕುಂತಳಾಗೆ ಮರದ ಕೋಲಿನಿಂದ ಹೊಡೆದಿದ್ದರು. ಇದರಿಂದ ಶಕುಂತಳಾ ಅವರ ತಲೆಗೆ ಗಾಯವಾಗಿ ತೀವ್ರ ರಕ್ತ ಒಸರಿತು. ಇದರಿಂದ ಹೆದರಿದ ಸದಾನಂದ ಮಲಗುವ ಕೋಣೆಯೊಳಗೆ ತೆರಳಿ ನೇಣು ಬಿಗಿದುಕೊಂಡಿದ್ದಾರೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
