![]() |
| ಪವನ್ ಕಲ್ಯಾಣ್ - ಪುತ್ತಿಗೆ ಶ್ರೀ |
ಉಡುಪಿ: ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭಾಗಿಯಾಗಲಿದ್ದಾರೆ. ವಿಶೇಷ ವಿಮಾನದ ಮೂಲಕ ಅವರು ಮಂಗಳೂರಿಗೆ ಆಗಮಿಸಿ ಉಡುಪಿ ತಲುಪಿದ್ದಾರೆ.
ಪರ್ಯಾಯ ಪುತ್ತಿಗೆ ಮಠಾಧೀಶರ ನೇತೃತ್ವದಲ್ಲಿ ಗೀತೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ತಿಂಗಳ ಹಿಂದೆ ಪೇಜಾವರ ಸ್ವಾಮೀಜಿ ಉದ್ಘಾಟಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂದು ಗೀತೋತ್ಸವದ ಸಮಾರೋಪ ಸಮಾರಂಭಕ್ಕೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಅತಿಥಿಯಾಗಿ ಭಾಗಿಯಾಗಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿ ಅವರು ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಮಾಡಿ ಸ್ವಾಮೀಜಿಗಳ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಪ್ರವಾಸೀ ಮಂದಿರಕ್ಕೆ ಪವನ್ ಭೇಟಿಗಾಗಿ ಆಗಮಿಸಿದ ಸಂಸದ ಕೋಟಗೆ ನಿರಾಶೆಯಾಯಿತು.ಸುಮಾರು ಮುಕ್ಕಾಲು ತಾಸು ಕಾದರೂ ಕೋಟ ಭೇಟಿಗೆ ಪವನ್ ಕಲ್ಯಾಣ್ ಅಂಗರಕ್ಷಕರು ಅವಕಾಶ ನೀಡಿರಲಿಲ್ಲ.ಕೊನೆ ಕ್ಷಣದಲ್ಲಿ ಸ್ವಲ್ಪ ಹೊತ್ತು ಮಾತ್ರ ಅವಕಾಶ ಕಲ್ಪಿಸಲಾಯಿತು.ಬಳಿಕ ಅಲ್ಲಿಂದ ಪವನ್ ಕಲ್ಯಾಣ್ ಮಠದತ್ತ ತೆರಳಿದರು. ಮಠದ ರಾಜಾಂಗಣದಲ್ಲಿ ನಡೆಯುವ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಈಗ ಭಾಗಿಯಾಗಿದ್ದಾರೆ.
