ಮಂಗಳೂರು: ಜೆಸಿಐ ಇಂಪ್ಯಾಕ್ಟ್ 2026 ಅಧ್ಯಕ್ಷರಾಗಿ ಡಾ.ಶ್ವೇತಾ ಕಾಮತ್ ಪದಗ್ರಹಣ



ಮಂಗಳೂರು:  ಜೆಸಿಐ ಇಂಪ್ಯಾಕ್ಟ್ 2026 ಅಧ್ಯಕ್ಷರಾಗಿ ಡಾ.ಶ್ವೇತಾ ಕಾಮತ್ಪ ಪದಗ್ರಹಣ ಮಾಡಿದರು.ನಂತೂರಿನ ಈಡನ್ ಕ್ಲಬ್ ನಲ್ಲಿ ಈ ಅಪೂರ್ವ ಸಮಾರಂಭವನ್ನು ಆಯೋಜಿಸಲಾಗಿತ್ತು.ಡಾ.ಶ್ವೇತಾ  ಕಾಮತ್ ಜೊತೆಗೆ ಪದಾಧಿಕಾರಿಗಳ ಪದಗ್ರಹಣವೂ ಇದೇ ವೇಳೆ ನಡೆಯಿತು.ಶ್ವೇತಾ ಕಾಮತ್ ,ಓರ್ವ ವೈದ್ಯರು ,ಎಂಟರ್ ಪ್ರೀನರ್ ,ಕಲಾವಿದೆಯೂ ಆಗಿದ್ದಾರೆ.2025 ರಲ್ಲಿ ಮಿಸೆಸ್ ಇಂಡಿಯಾ ಇಂಟರ್ ನ್ಯಾಷನಲ್ ಪ್ರಶಸ್ತಿ ವಿಜೇತರೂ ಹೌದು. ಸಾಮಾಜಿಕ ಕಳಕಳಿಯ ಜೊತೆಗೆ  ನಾಯಕತ್ವ ಮತ್ತು ದೂರದೃಷ್ಟಿಯ ಜವಾಬ್ದಾರಿ ಹೊತ್ತಿದ್ದಾರೆ.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಅನಿಲ್ ಶೆಟ್ಟಿ ,ಪ್ರೊ.ಮತ್ತು ಎಚ್ ಓ ಡಿ ,ಫಾದರ್ ಮುಲ್ಲರ್ಸ್ ,ಝೋನ್ ಪ್ರೆಸಿಡೆಂಟ್ ಜೆಎಫ್ ಎಫ್ ಸಂತೋಷ್ ಶೆಟ್ಟಿ ,ಕಾಶಿನಾಥ್ ಗೊಗಾಟೆ ,ದೀಪಕ್ ಗಂಗೂಲಿ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಡಾ.ಶ್ವೇತಾ ,ಮುಂದಿನ ದಿನಗಳಲ್ಲಿ ನಾಯಕತ್ವ ಅಭಿವೃದ್ಧಿ ,ಸಮುದಾಯ ಸೇವೆ ,ಮಹಿಳಾ ಮತ್ತು ಮಕ್ಕಳ ಯೋಗಕ್ಷೇಮದ ಜೊತೆ ಸಮಾಜದಲ್ಲಿ ಉತ್ತಮ ಮತ್ತು ಅರ್ಥಪೂರ್ಣ ಬದಲಾವಣೆ ತರುವ ಆಶಯವನ್ನು ವ್ಯಕ್ತಪಡಿಸಿದರು.