ಕೊಕ್ಕರ್ಣೆ:ಎಣ್ಣೆ ಮಿಲ್‌ ನಲ್ಲಿ ಶಾರ್ಟ್ ಸರ್ಕೂಟ್ ನಿಂದ ಬೆಂಕಿ ಅವಘಡ- ಸುಟ್ಟು ಕರಕಲಾದ ಫ್ಯಾಕ್ಟರಿ

ಎಣ್ಣೆ ಮಿಲ್ ನಲ್ಲಿ ಬೆಂಕಿ


ಬ್ರಹ್ಮಾವರ : ಕೊಕ್ಕರ್ಣೆ ಪೇಟೆಯಲ್ಲಿರುವ ತೆಂಗಿನ ಎಣ್ಣೆ ಮಿಲ್ ಒಂದಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೊದಲು ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಇಡೀ ಫ್ಯಾಕ್ಟರಿಯನ್ನು ಆವರಿಸಿತು. ಈ ವೇಳೆ ಫ್ಯಾಕ್ಟರಿಯಲ್ಲಿ ದಾಸ್ತಾನು ಇರಿಸಿದ್ದ ತೆಂಗಿನ ಎಣ್ಣೆ ಮತ್ತು ಕೊಬ್ಬರಿ ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಯ ಕೆನ್ನಾಲೆಗೆಗೆ ಫ್ಯಾಕ್ಟರಿಯ ಬಹುಭಾಗ ಸುಟ್ಟು ಕರಕಲಾಗಿದೆ.