ಕಾರ್ಕಳ: ಭಾರೀ ಮಳೆಗೆ ಆಟೋ ರಿಕ್ಷಾದ ಮೇಲೆ ಉರುಳಿಬಿದ್ದ ಮರ; ಕೂದಲೆಳೆಯಂತರದಲ್ಲಿ ಪಾರಾದ ಪ್ರಯಾಣಿಕರು!

ರಿಕ್ಷಾದ ಮೇಲೆ ಮರ ಬಿದ್ದಿರುವುದು

ಕಾರ್ಕಳ: ಉಡುಪಿ ಜಿಲ್ಲೆಯ ಹಲವೆಡೆ ಸಂಜೆ ವೇಳೆ ಭಾರಿ ಮಳೆಯಾಗಿದೆ.ಸಿಡಿಲು ಗುಡುಗು ಸಹಿತ ಗಾಳಿ ಮಳೆಗೆ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತು. ಇದೇ ವೇಳೆ ಅಕಾಲಿಕ ಮಳೆಗೆ ಕೆಲವೆಡೆ ಹಾನಿ ಉಂಟಾದ ಬಗ್ಗೆ ವರದಿಯಾಗಿದೆ. ಕಾರ್ಕಳದಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರವೊಂದು ಉರುಳಿ  ಬಿದ್ದಿದೆ.ಈ ವೇಳೆ ರಿಕ್ಷಾದಲ್ಲಿ  ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು.ಅದೃಷ್ಟವಶಾತ್ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರ್ಕಳ ತಾಲೂಕಿನ  ತೆಳ್ಳಾರು ರಸ್ತೆ ಬಳಿ ಈ ದುರ್ಘಟನೆ ಸಂಭವಿಸಿದ್ದು ರಿಕ್ಷಾಕ್ಕೆ ಮಾತ್ರ ಹಾನಿ ಉಂಟಾಗಿದೆ.