ಕಾಪು:ದಾಂಪತ್ಯ ಸಮಸ್ಯೆಯಿಂದ ಕೌನ್ಸೆಲಿಂಗ್ ಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ- ಆರೋಪಿ ಬಂಧನ

ಆರೋಪಿ ನಿರಂಜನ ಶೆಟ್ಟಿ

ಕಾಪು: ಕಾಪು ತಾಲೂಕಿನ ಮೂಳೂರು ಗ್ರಾಮದಲ್ಲಿರುವ ‘ಸುನಂದಾ ವೆಲ್ನೆಸ್ ಸೆಂಟರ್’ ನಲ್ಲಿ ಕೌನ್ಸಿಲಿಂಗ್ ಗೆ ಬಂದಿದ್ದ ಮಹಿಳೆಗೆ ದೈಹಿಕ ಸ್ಪರ್ಶ ಮಾಡಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ, ಆರೋಪಿ ನಿರಂಜನ ಶೇಖರ ಶೆಟ್ಟಿ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ದಾಂಪತ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಂತ್ರಸ್ಥ ಮಹಿಳೆ ಕೌನ್ಸಿಲಿಂಗ್ಗ್ ಗಾಗಿ ಕಂಕಣಗುತ್ತು ಕಾಂಪೌಂಡ್ ನಲ್ಲಿರುವ ವೆಲ್ನೆಸ್ ಸೆಂಟರ್ ಗೆ ಭೇಟಿ ನೀಡಿದ್ದರು. ಈ ವೇಳೆ ಕೌನ್ಸಿಲರ್ ಆಗಿದ್ದ ನಿರಂಜನ ಶೇಖರ ಶೆಟ್ಟಿ ಅವರು ಕೌನ್ಸಿಲಿಂಗ್ ಹೆಸರಿನಲ್ಲಿ ದೈಹಿಕ ಸ್ಪರ್ಶ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ದಾಖಲಾಗಿದೆ.

ಘಟನೆ ಬಳಿಕ ಮಹಿಳೆ ಕಾಪು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ, ಅಪರಾಧ ಸಂಖ್ಯೆ 151/2025, ಕಲಂ 74, 75(1), 75(2), 79 BNS ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪೊಲೀಸರು ಆರೋಪಿ ನಿರಂಜನ ಶೇಖರ ಶೆಟ್ಟಿಯನ್ನು ದಸ್ತಗಿರಿ ಮಾಡಿದ್ದು, ಬಂಧಿತನನ್ನು   ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.