ಶಾಂತಿನಿಕೇತನ ಶಾಲಾ ಬಾಲಕಿಯರ ತಂಡ ರಾಜ್ಯಕ್ಕೇ ಪ್ರಥಮ

ವಿಜೇತ ತಂಡದ ಜೊತೆ ಶಾಲಾ ಮುಖ್ಯಸ್ಥರು

ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ 14 ವರ್ಷ ಕೆಳಗಿನ ಬಾಲಕಿಯರ ಕಬ್ಬಡಿ ಪಂದ್ಯಾಟದಲ್ಲಿ ಉಡುಪಿ- ದ.ಕ. ಜಿಲ್ಲೆಯನ್ನೊಳಗೊಂಡ ಮೈಸೂರು ವಿಭಾಗೀಯ  ತಂಡವು ಪ್ರಥಮ ಸ್ಥಾನ ಪಡೆದಿದ್ದು, ತಂಡವನ್ನು ಪ್ರತಿನಿಧಿಸಿದ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕು ಮಂದಿ ಬಾಲಕಿಯರು ಅಭಿನಂದನೆಗೆ ಪಾತ್ರರಾಗಿದ್ದಾರೆ. 

ತಂಡದಲ್ಲಿ ಶಾಂತಿನಿಕೇತನ ಶಾಲೆಯ ಪ್ರಾಪ್ತಿ ಎಂ, ಸಿಂಚನಾ ಎಸ್. ಸುವರ್ಣ, ತನ್ವಿ, ಆತ್ಮಿಕಾ ಪಾಲ್ಗೊಂಡಿದ್ದು ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜೇತರಾಗಿದ್ದಾರೆ.

ಶಾಂತಿನಿಕೇತನ ಶಾಲೆಯ ಇನ್ನೋರ್ವ ವಿದ್ಯಾರ್ಥಿನಿ ಸಂಜನಾ ಶೆಟ್ಟಿ ಪಾಲ್ಗೊಂಡಿದ್ದ 17 ವರ್ಷ ಕೆಳಗಿನವರ ತಂಡವೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ತರಬೇತುದಾರರಾಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶರತ್ ಎಚ್.ಎಸ್. ಹಾಗೂ ವಿಂದ್ಯಾ ರಾವ್ ಕಾರ್ಯ ನಿರ್ವಹಿಸಿದ್ದರು.

ಮಕ್ಕಳ ಸಾಧನೆಗೆ ಶಾಲಾ ಸಂಚಾಲಕ ಅಲೆವೂರು ದಿನೇಶ್ ಕಿಣಿ ಹಾಗೂ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ಅಭಿನಂಧನೆ ಸಲ್ಲಿಸಿದ್ದಾರೆ.