ಉಡುಪಿ: ಭಾನುವಾರ  (ಅ.5) ಡಾ.ಜಿ.ಶಂಕರ್ ಹುಟ್ಟುಹಬ್ಬ - ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಸಪ್ತತಿ ಆಚರಣೆ

ಉಡುಪಿ: ಭಾನುವಾರ (ಅ.5) ಡಾ.ಜಿ.ಶಂಕರ್ ಹುಟ್ಟುಹಬ್ಬ - ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಸಪ್ತತಿ ಆಚರಣೆ

 


ಉಡುಪಿ: ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಹರಿಕಾರ, ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್ ಅ.5ರಂದು ತಮ್ಮ 70ನೇ ಹುಟ್ಟುಹಬ್ಬವನ್ನು ವಿವಿಧ ಸಮಾಜಮುಖಿ ಕಾರ್ಯಗಳೊಂದಿಗೆ ಆಚರಿಸಲಿದ್ದಾರೆ.ಆ ಪ್ರಯುಕ್ತ ಜಿಲ್ಲಾ ಮೊಗವೀರ ಯುವ ಸಂಘಟನೆಯ ವಿವಿಧ ಘಟಕ ವ್ಯಾಪ್ತಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೈಂದೂರು, ಶೀರೂರು, ಹೆಮ್ಮಾಡಿ, ಕುಂದಾಪುರ, ಕೋಟೇಶ್ವರ, ಕೋಟ, ಸಾಲಿಗ್ರಾಮ, ಮಂದಾರ್ತಿ, ಹಾಲಾಡಿ, ಹಿರಿಯಡಕ, ಮಲ್ಪೆ, ಉಳ್ಳೂರು, ಬೆಳ್ಳಂಪಳ್ಳಿ, ಉದ್ಯಾವರ ಘಟಕಗಳಲ್ಲಿ ಅಶಕ್ತರು ಮತ್ತು ಅನಾರೋಗ್ಯ ಪೀಡಿತರಿಗೆ ಧನಸಹಾಯ, ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ನೆರವು, ಗೋ ಶಾಲೆಗೆ ಮೇವು ಮತ್ತು ಪಶುಆಹಾರ ಪೂರೈಕೆ ನಡೆಯಲಿದೆ.

ಜಿಲ್ಲಾ ಮೊಗವೀರ ಯುವ ಸಂಘಟನೆ ವತಿಯಿಂದ ಜಿಲ್ಲಾ ಆಸ್ಪತ್ರೆ ಮತ್ತು ಬ್ರಹ್ಮಾವರ ಸರಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಅ.6ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ ಬಾರ್ಕೂರಿನ ಸಂಕಮ್ಮ ತಾಯಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article