
ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೋವಿ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ-ಮುಖಂಡ ಪವನ್ ಕುಮಾರ್ ಶಿರ್ವ ಅಕ್ರೋಶ
ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಭೋವಿ ಜನಾಂಗ (ಪರಿಶಿಷ್ಟ ಜಾತಿ)ಪ್ರಮಾಣ ಪತ್ರ ನೀಡುತ್ತಿಲ್ಲ.ಮುಂಚೆ ಕೆಲವು ಜನರಿಗೆ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ.ಈಗ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ.ಈಗ ಜಾತಿ ಪ್ರಮಾಣ ಪತ್ರಕ್ಕೆ ಬರೆದು ಹಾಕಿದರೆ ವಲಸೆ ಪ್ರಮಾಣ ಪತ್ರ ತನ್ನಿ ಎಂದು ಹೇಳಿ ವಾಪಾಸ್ಸು ಕಳಿಸುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 31 ಜಿಲ್ಲೆಗಳಿದ್ದು ಅದರಲ್ಲಿ 29 ಜಿಲ್ಲೆಗಳಲ್ಲಿ ನೀಡುತ್ತಿದ್ದಾರೆ.ಆದರೆ ನಮ್ಮ ಅವಿಭಾಜ್ಯ ಜಿಲ್ಲೆಯಲ್ಲಿ ಮಾತ್ರ ವಲಸೆ ಪ್ರಮಾಣ ಪತ್ರ ಬೇಕೆಂದು ಹೇಳುತ್ತಾರೆ.ಕರ್ನಾಟಕದಲ್ಲಿ 29 ಜಿಲ್ಲೆಗೆ ಒಂದು ಕಾನೂನು ಮತ್ತು ನಮ್ಮ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಕಾನೂನು ಎಂದು ಪವನ್ ಕುಮಾರ್ ಶಿರ್ವ ಅವರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಸಮಸ್ಯೆಯಿಂದಾಗಿ ತುಂಬಾ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ.ಮಕ್ಕಳಿಗೆ ವಿದ್ಯಾಭಾಸಕ್ಕಾಗಲಿ ,ಉದ್ಯೋಗ ಕ್ಕಾಗಲಿ ಎಲ್ಲದರಲ್ಲೂ ವಂಚಿತರಾಗಿದ್ದಾರೆ.ಆದ್ದರಿಂದ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಬೇಕಾಗಿ ಸರ್ಕಾರಕ್ಕೆ ಪವನ್ ಕುಮಾರ್ ಶಿರ್ವ ಒತ್ತಾಯಿಸಿದ್ದಾರೆ.