ನವದೆಹಲಿ: ಇಳಿಕೆಯಾಗಿದ್ದ ವಾಣಿಜ್ಯ ಅನಿಲ ಸಿಲಿಂಡರ್​ಗಳ ದರ ಮತ್ತೆ ಏರಿಕೆ: 15.50 ರೂ. ಹೆಚ್ಚಳ !ಇಂದಿನಿಂದಲೇ ಜಾರಿ

ನವದೆಹಲಿ: ಇಳಿಕೆಯಾಗಿದ್ದ ವಾಣಿಜ್ಯ ಅನಿಲ ಸಿಲಿಂಡರ್​ಗಳ ದರ ಮತ್ತೆ ಏರಿಕೆ: 15.50 ರೂ. ಹೆಚ್ಚಳ !ಇಂದಿನಿಂದಲೇ ಜಾರಿ

 

ನವದೆಹಲಿ: ಕಳೆದ ಹಲವು ತಿಂಗಳಿನಿಂದ ಕಡಿಮೆಯಾಗಿದ್ದ ವಾಣಿಜ್ಯ ಅನಿಲ ಸಿಲಿಂಡರ್​ಗಳ ದರ ಮತ್ತೆ ಏರಿಕೆಯಾಗಿದೆ. ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳಲ್ಲಿ ಬಳಸುವ 19 ಕೆಜಿಯ ವಾಣಿಜ್ಯ ಅನಿಲ ಸಿಲಿಂಡರ್​ಗಳ ದರವನ್ನು 15.50 ರೂ.ನಷ್ಟು ಹೆಚ್ಚಿಸಲಾಗಿದ್ದು, ಇಂದಿನಿಂದ (ಅ.1) ಜಾರಿಗೆ ಬರಲಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ಘೋಷಿಸಿವೆ.

ಗೃಹ ಬಹಳಕೆಗಾಗಿ ಬಳಸುವ 14.2 ಕೆಜಿಯ ಸಿಲಿಂಡರ್​ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕಂಪನಿ ತಿಳಿಸಿದೆ.

ಸಿಲಿಂಡರ್​ ದರ ಏರಿಕೆ ಮಾಹಿತಿ: ಕಳೆದ ಸೆ. ತಿಂಗಳಿನಲ್ಲಿ ಸಿಲಿಂಡರ್​ ದರ 51.50 ರಷ್ಟು ಕಡಿಮೆಯಾಗಿ 1,580ಕ್ಕೆ ದೊರಕಿತ್ತು.

ಸದ್ಯದ ಏರಿಕೆ ನಂತರ ದರ ಹೀಗಿದೆ.

ರಾಷ್ಟ್ರ ರಾಜಧಾನಿ ದೆಹಲಿ: ವಾಣಿಜ್ಯ ಸಿಲಿಂಡರ್ ದರ ₹1,595.50.

ಮುಂಬೈ: ವಾಣಿಜ್ಯ ಸಿಲಿಂಡರ್ ದರ ₹1,547.

ಕೋಲ್ಕತ್ತಾ ಮತ್ತು ಚೆನ್ನೈ: ವಾಣಿಜ್ಯ ಸಿಲಿಂಡರ್ ದರ ₹1,700 ಮತ್ತು ₹1,754ಕ್ಕೆ ಏರಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಓಸಿ) ತಿಳಿಸಿದೆ.

ಏಕಾಏಕಿ ಈ ದರ ಏರಿಕೆಯಿಂದಾಗಿ ದೇಶದ ರಾಜಧಾನಿ ಸೇರಿದಂತೆ ಎಲ್ಲೆಡೆ ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಕಾರಣ ಅವರು ತಮ್ಮ ದೈನಂದಿನ ಕಾರ್ಯಗಳಾದ ಸಣ್ಣ ಅಂಗಡಿಗಳು, ಹೋಟೆಲ್‌ಗಳು ಮತ್ತು ಇತರ ವ್ಯವಹಾರಗಳಿಗಾಗಿ ಈ ಸಿಲಿಂಡರ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ಇನ್ನು ಗೃಹ ಬಳಕೆಗೆ ಉಪಯೋಗಿಸುವ ಸಿಲಿಂಡರ್‌ಗಳ (ಡೊಮೆಸ್ಟಿಕ್) ದರಗಳು ಏಪ್ರಿಲ್‌ನಿಂದ ಯಾವುದೇ ಬದಲಾವಣೆ ಕಂಡಿಲ್ಲ. ಪ್ರಸ್ತುತ, ಪ್ರಮುಖ ನಗರಗಳಲ್ಲಿನ ಗೃಹಬಳಕೆಯ ಸಿಲಿಂಡರ್ ದರಗಳು ಹೀಗಿವೆ:

ದೆಹಲಿ: ₹853

ಚೆನ್ನೈ: ₹868.50

ಕೋಲ್ಕತ್ತಾ: ₹879

ಮುಂಬೈ: ₹852.50

Ads on article

Advertise in articles 1

advertising articles 2

Advertise under the article