
ಪರ್ಕಳ ನಾಳೆಯಿಂದ ( ಸೆ.15) ತುರ್ತು ರಸ್ತೆ ಕಾಮಗಾರಿ- ಮಾರ್ಗ ಬದಲು
13/09/2025 03:01 PM
ಮಣಿಪಾಲ: ರಾಷ್ಟ್ರೀಯ ಹೆದ್ದಾರಿ 169 A ಪರ್ಕಳದಲ್ಲಿ ರಸ್ತೆ ತೀವ್ರ ಸ್ವರೂಪದಲ್ಲಿ ಹದಗೆಟ್ಟಿದ್ದು ಸಾರ್ವಜನಿಕರ ಒತ್ತಾಯದ ನಡುವೆ ಜಿಲ್ಲಾಡಳಿತ ರೀಪೇರಿ ಕಾರ್ಯ ಕೈಗೊಳ್ಳುತ್ತಿದೆ. ತುರ್ತು ಕಾಮಗಾರಿಯ ಹಿನ್ನಲೆಯಲ್ಲಿ ಸೆಪ್ಟೆಂಬರ್ 15 ರಿಂದ ಸೆ. 21 ರ ವರೆಗೆ 7 ದಿನಗಳ ಕಾಲ ಪರ್ಕಳ ಭಾಗದಲ್ಲಿ ದ್ವಿಮುಖ ಸಂಚಾರ ನಿಷೇಧಿಸಲಾಗಿದೆ.
ಉಡುಪಿ ಕಡೆಯಿಂದ ಶಿವಮೊಗ್ಗ, ಹೆಬ್ರಿ, ಕಾರ್ಕಳ ಕಡೆಗೆ ತೆರಳುವ ವಾಹನಗಳು ಈಶ್ವರನಗರದಲ್ಲಿ ಎಡಕ್ಕೆ ತಿರುಗಿ ಸರಳೆಬೆಟ್ಟು-ಕೊಡಂಗೆ- ಪರ್ಕಳ ಮಾರ್ಕೆಟ್ ರಸ್ತೆ ಮೂಲಕ ಪರ್ಕಳ ರಾಷ್ಟ್ರೀಯ ಹೆದ್ದಾರಿಗೆ ಚಲಿಸಬೇಕು.
ಶಿವಮೊಗ್ಗ, ಹೆಬ್ರಿ, ಕಾರ್ಕಳ ಕಡೆಯಿಂದ ಮಣಿಪಾಲ -ಉಡುಪಿ ಕಡೆಗೆ ಬರುವ ವಾಹನಗಳು ಹೆದ್ದಾರಿಯಲ್ಲೇ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿ ರಿಪೇರಿ ಕಾರ್ಯ ಕೈಗೊಳ್ಳಲಾಗುತ್ತಿದೆ.