
ಕಾಪು: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವಹೇಳನ ಖಂಡಿಸಿ ಕಾಪು ಹಳೇ ಮಾರಿಯಮ್ಮನ ಗುಡಿಯಲ್ಲಿ ಜನಾಗ್ರಹ ಸಭೆ
ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನವನ್ನು ಖಂಡಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಕಾಪು ಇವರ ನೇತೃತ್ವದಲ್ಲಿ ಹಳೇ ಮಾರಿಯಮ್ಮ ಸಭಾಭವನದಲ್ಲಿ ಇಂದು ಜನಾಗ್ರಹ ಸಭೆ ನಡೆಯಿತು. ಜನಾಗ್ರಹ ಸಭೆಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರ ನಮ್ಮ ನಾಡಿನ ಅಸ್ಮಿತೆಯಾಗಿದೆ. ಕ್ಷೇತ್ರದ ವಿರುದ್ದ ನಡೆಯುತ್ತಿರುವ ಅಪಪ್ರ ಚಾರ, ಷಡ್ಯಂತ್ರಗಳಿಗೆ ನಾವು ಉತ್ತರಿಸುವ ಅನಿವಾರ್ಯತೆ ಎ ದುರಾಗಿದೆ. ಧರ್ಮವನ್ನು ಉಳಿಸುವುದಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕ್ಷೇತ್ರದ ಹೆಸರಿಗೆ ಕಳಂಕ ತಂದು, ಅಪಪ್ರಚಾರ ನಡೆಸುತ್ತಿರುವವರು ಮತ್ತು ಧರ್ಮ ಕಾರ್ಯಗಳನ್ನು ವಿನಾಶಗೊಳಿಸುವುದಕ್ಕೆ ಪ್ರಯ ತ್ನಿಸುವವರ ವಿರುದ್ಧ ನಾವು ಗೋಡೆಗಳಾಗಿ ನಿಲ್ಲಬೇಕಿದೆ ಎಂದರು.
ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ, ಸೌಜನ್ಯ ಪ್ರಕರಣ ಅ ತ್ಯಂತ ದುರಾದೃಷ್ಟಕರವಾಗಿದೆ. ಈ ಪ್ರಕರಣದಲ್ಲಿ ಹೋರಾಟಗಾರರೇ ತನಿಖೆಯ ದಾರಿ ತಪ್ಪಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ಖರೀದಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಒಂದು ಕೋಟಿ ರೂಪಾಯಿ ಖರ್ಚು ಆಗಿದೆ ಎಂದು ಸೌಜನ್ಯ ಪರ ಹೋರಾಟಗಾರರೇ ತಿಳಿಸಿರುತ್ತಾರೆ. ಆರೋಪಿ ಸಂತೋಷ್ ರಾವ್ ನನ್ನು ಮಂಪರು ಪರೀಕ್ಷೆಗೊಳಪಡಿಸುವ ಕುರಿತಾಗಿ ಗೊಂದಲದ ಹೇಳಿಕೆಗಳು ಕೇಳಿ ಬಂದಿವೆ. ಈ ಬಗ್ಗೆ ಎಷ್ಟು ಬಾರಿ ಕೇಳಿದರೂ ಅದನ್ನು ಧೃಡೀಕರಿಸಲು ಹೋರಾಟಗಾರರಿಗೆ ಸಾಧ್ಯವಾಗಿಲ್ಲ. ನಾಳೆಯೇ ಸಂತೋಷ್ ರಾವ್ ನನ್ನು ಮಂಪರು ಪರೀಕ್ಷೆ ನಡೆಸಿ, ಅಲ್ಲಿಯೂ ಅಪರಾಧಿ ಅಲ್ಲ ಎಂದು ಧೃಡಪಟ್ಟಲ್ಲಿ ಆತನ ಕಾಲು ತೊಳೆದು ಸತ್ಕರಿಸುತ್ತೇನೆ. ಸೌಜನ್ಯ ಪರವಾಗಿ ಮತ್ತೆ ಹೋರಾಟಕ್ಕೆ ಇಳಿಯುತ್ತೇನೆ ಎಂದು ಹೇಳಿದರು.
ಧಾರ್ಮಿಕ ಚಿಂತಕ ದಾಮೋದರ ಶರ್ಮ ಬಾರ್ಕೂರು ಮಾತನಾಡಿ, ಧರ್ಮಸ್ಥಳದ ವಿರುದ್ಧದ ಅಪಪ್ರಚಾರದಲ್ಲಿ ಯಾವುದೇ ಹುರುಳಿಲ್ಲ. ಆದರೂ ಮತ್ತೆ ಮತ್ತೆ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯವಾಗಿದೆ. ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರೇ ಸತ್ಯದ ಅನ್ವೇಷಣೆಗೆ ನಮ್ಮ ಬೆಂಬಲವಿದೆ ಎಂದು ಹೇಳುತ್ತಿದ್ದಾರೆ. ಇಂತಹ ವ್ಯಕ್ತಿಗಳ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ವ್ಯಕ್ತಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವಂತಾಗಲಿ. ಈ ಹೋರಾಟಕ್ಕೆ ಜಾತ್ಯಾತೀತವಾಗಿ, ಧ ರ್ಮಾತೀತವಾಗಿ ಬೆಂಬಲಿಸೋಣ ಎಂದರು.