
ಬ್ರಹ್ಮಾವರ: ತಾಯಿ ಮಗು ಆತ್ಮಹತ್ಯೆಗೆ ಶರಣು - ಬ್ರಹ್ಮಾವರದಲ್ಲೊಂದು ಹೃದಯ ವಿದ್ರಾವಕ ಘಟನೆ
01/09/2025 11:23 AM
ಬ್ರಹ್ಮಾವರ: ತಾಯಿ ಮತ್ತು ಮಗು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಬ್ರಹ್ಮಾವರದಲ್ಲಿ ಸಂಭವಿಸಿದೆ.ತಾಯಿ ಸುಷ್ಮೀತಾ (23) ಮಗು ಶ್ರೇಷ್ಠ (1ವರ್ಷ 6 ತಿಂಗಳು) ಆತ್ಮಹತ್ಯೆಗೆ ಶರಣಾದವರು.ಪತಿ ಕೋರ್ಟ್ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬ್ರಹ್ಮಾವರ ಪೊಲೀಸರು ಸ್ಥಳದಲ್ಲಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.