ಶಿರ್ವ : ಪಾಪನಾಶಿನಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ-  ಪೊಲೀಸರ ದಾಳಿ - ಹಿಟಾಚಿ ,ಮರಳು ವಶ

ಶಿರ್ವ : ಪಾಪನಾಶಿನಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ- ಪೊಲೀಸರ ದಾಳಿ - ಹಿಟಾಚಿ ,ಮರಳು ವಶ

 


ಶಿರ್ವ: ಕಾಪು ತಾಲೂಕಿನ ಶಿರ್ವ ಗ್ರಾಮದ ಗರಡಿ ಮನೆ ಎಂಬಲ್ಲಿ ಪಾಪನಾಶಿನಿ ಹೊಳೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ  ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.  ಶಿರ್ವ ಪೊಲೀಸ್‌ ಠಾಣೆ ಪಿಎಸ್‌ಐ ಮಂಜುನಾಥ ಮರಬದ್‌ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಸ್ಥಳದಲ್ಲಿದ್ದ ಎರಡು ಟಿಪ್ಪರ್‌ ಮರಳು ಹಾಗೂ ಒಂದು ಹಿಟಾಚಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. 

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 57/2025 ಕಲಂ. 303(2) ಬಿಎನ್‌ ಎಸ್‌, 4, 4ಎ, 21 MMDR Act ನಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article