ಉಡುಪಿ: ಕರಾವಳಿಯ ಪ್ರಸಿದ್ಧ ದೈವ ನರ್ತಕ ಕೃಷ್ಣ ಗುಜರನ್ ದೈವಾಧೀನ

ಉಡುಪಿ: ಕರಾವಳಿಯ ಪ್ರಸಿದ್ಧ ದೈವ ನರ್ತಕ ಕೃಷ್ಣ ಗುಜರನ್ ದೈವಾಧೀನ

 


ಉಡುಪಿ: ಕರಾವಳಿಯ ಹೆಮ್ಮೆಯ ದೈವ ನರ್ತಕರಾದ ಶ್ರೀಕೃಷ್ಣ ಗುಜರನ್ (80)  ಅಲ್ಪಕಾಲದ  ಅಸೌಖ್ಯದಿಂದ ಇಂದು ಬೆಳಿಗ್ಗೆ ಕುತ್ಪಾಡಿಯ ಸ್ವಗೃಹದಲ್ಲಿ ನಿಧನರಾಗಿರುತ್ತಾರೆ. 

ಸದಾ ಶ್ವೇತ ವಸ್ತ್ರದಾರಿಯಾಗಿ ಸರಳ ಸಜ್ಜನಿಕೆಯ ಹಲವಾರು ವರ್ಷಗಳ ಕಾಲ ದೈವ, ದೇವರುಗಳ ಸೇವೆ ಮಾಡಿ ಸಾರ್ಥಕ ಜೀವನ ನಡೆಸಿ ಇತರರಿಗೆ ಮಾದರಿಯಾಗಿ ಜೀವಿಸಿದ್ದರು.

ದೈವ ನರ್ತಕರಾಗಿ ಕರಾವಳಿಯಲ್ಲಿ ಈಗಾಗಲೇ ತನ್ನದೇ ಆದ ಖ್ಯಾತಿ ಪಡೆದಿರುವ ಮಹೇಶ್ ಗಜರನ್ ಹಾಗೂ ಮನೋಹರ್ ಮತ್ತು ಇಬ್ಬರು ಹೆಣ್ಣು ಮಕ್ಕಳು, ಬಂಧು ಬಾಂಧವರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಹಲವಾರು ಗರೋಡಿ, ಸಂಘ ಸಂಸ್ಥೆಗಳು ಆರಾಧನಾ ಕಲೆಯಲ್ಲಿ ಇವರ ಸೇವೆಯನ್ನು ಗೌರವಿಸಿ ಸನ್ಮಾನಿಸಿದ್ದರು. 

ಇಂದು ಮಧ್ಯಾಹ್ನ 12:30 ಕ್ಕೆ ಸರಿಯಾಗಿ ಮೃತರ ಅಂತಿಮ ವಿಧಿ ವಿಧಾನಗಳು ಅವರ ಮನೆಯಲ್ಲಿ ಜರುಗಲಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article