
ಮೊಳಹಳ್ಳಿ: ಜಯರತ್ನ ಆಪ್ತ ಸಮಾಲೋಚನಾ ಕೇಂದ್ರ ಉದ್ಘಾಟನೆ
ಮೊಳಹಳ್ಳಿ: ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಮಾನಸಿಕ ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ( ರಿ.) ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣ ಗುಡ್ಡೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಚಿತ ಆಪ್ತ ಸಮಾಲೋಚನೆ ಕೇಂದ್ರವನ್ನು ಡಾ. ಪಿ. ವಿ ಭಂಡಾರಿ ಉದ್ಘಾಟಿಸಿದರು. ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಆಶಾಕಾರ್ಯಕರ್ತೆಯರಿಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಬಗ್ಗೆ ಸಮಾಜದಲ್ಲಿರುವ 12 ಕಳಂಕಗಳ ಬಗ್ಗೆ ಹಾಗೂ ಈ ಕಳಂಕಗಳನ್ನು ನಿವಾರಿಸುವಲ್ಲಿ ಕೆಲಸ ಮಾಡುವವರು ಪಾಲಿಸಬೇಕಾದ ವಿಷಯಗಳ ಬಗ್ಗೆ ಡಾ.ಪಿ.ವಿ ಭಂಡಾರಿ ಮಾಹಿತಿ ನೀಡಿದರು.
1.ಅವೇರ್ನೆಸ್ /ಜಾಗೃತಿ: ತಪ್ಪು ಮಾಹಿತಿಯನ್ನು ಎದುರಿಸಲು ಮತ್ತು ಮಾನಸಿಕ ಆರೋಗ್ಯ ಹೋರಾಟಗಳನ್ನು ಸಾಮಾನ್ಯಗೊಳಿಸಲು ಶಿಕ್ಷಣ ಮತ್ತು ಮುಕ್ತ ಸಂಭಾಷಣೆಗಳ ಪ್ರಾಮುಖ್ಯತೆ. 2. ಎಕ್ಸೆಪ್ಟೆನ್ಸ್ / ಸ್ವೀಕಾರ: ಮಾನಸಿಕ ಮತ್ತು ದೈಹಿಕ ಕಾಯಿಲೆಗಳು ಒಂದೇ ತರಹ ಎಂದು ಹೋಲಿಸುವ ಮೂಲಕ ಪ್ರೋತ್ಸಾಹಿಸುವುದು ಮತ್ತು ಆಂತರಿಕ ಕಳಂಕವನ್ನು ಕಡಿಮೆ ಮಾಡಲು ಪ್ರಯತ್ನಿಸುವುದು.
3 ಆಕ್ಷನ್ / ಕ್ರಿಯೆ: , ವೈಯಕ್ತಿಕ ಕಥೆಗಳನ್ನು ಹಂಚಿಕೊಳ್ಳುವುದು ತಾರತಮ್ಯವನ್ನು ಕಡಿಮೆ ಮಾಡುವ ಸಮುದಾಯ ಕಾರ್ಯಕ್ರಮಗಳನ್ನು ಬೆಂಬಲಿಸುವುದು.4. ಅಡ್ವೋಕೇಸಿ / ಬೆಂಬಲಿಸುವುದು : ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ಹಕ್ಕುಗಳು, ಯೋಗಕ್ಷೇಮ ಮತ್ತು ಆರೈಕೆಯ ಪ್ರವೇಶವನ್ನು ಬೆಂಬಲಿಸುವುದು ಮತ್ತು ಮುನ್ನಡೆಸುವುದು. ಮಾನಸಿಕ ಕಾಯಿಲೆಯಲ್ಲಿ ಚಿಕಿತ್ಸೆಯ ಪಾತ್ರ ವಿವರಿಸಿ, ಕಾಯಿಲೆ ಎಷ್ಟು ಬೇಗ ಪತ್ತೆಯಾಗುವುದೋ ಅಷ್ಟು ಬೇಗ ರೋಗಿ ಚೇತರಿಸಿಕೊಳ್ಳುತ್ತಾನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರಕಾರಿ ಆಸ್ಪತ್ರೆಯ ಹಿರಿಯ ತಪಾಸಣಾ ವೈದ್ಯರಾದ ಡಾ. ನಾಗೇಶ್ ಇವರು ಆಪ್ತ ಸಮಾಲೋಚನ ಕೇಂದ್ರವನ್ನು ಹಳ್ಳಿ ಪ್ರದೇಶದಲ್ಲಿ ತೆರೆದು ಜನರಿಗೆ ಉಚಿತ ಮನೋಹಿತ ಸೇವೆ ನೀಡುವ ಟ್ರಸ್ಟಿನ ಉದ್ದೇಶವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರವರ್ತಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾನಸಿಕ ಕಾಯಿಲೆಯ ಕುರಿತು ಸಮಾಜದಲ್ಲಿರುವ ಕಳಂಕವನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಹಾಗೂ ಭಾವನಾತ್ಮಕ ಅಥವಾ ಮಾನಸಿಕ ಸವಾಲು ಇರುವಂತಹ ವಿದ್ಯಾರ್ಥಿಯಾಗಲಿ ಅಥವಾ ವ್ಯಕ್ತಿಯಾಗಲಿ ಯಾವುದೇ ಮೂಲೆಯಲ್ಲಿದ್ದರೂ ಆತನಿಗೆ ಉತ್ತಮ ಚಿಕಿತ್ಸೆ ದೊರೆತು ಒಳ್ಳೆಯ ಸಾಮಾಜಿಕ ಜೀವನ ದೊರಕಿಸಿ ಕೊಡಬೇಕೆಂಬುದು ನಮ್ಮ ಸಂಸ್ಥೆಯ ಧ್ಯೇಯ ಎಂದರು.
ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಕಾಲೇಜಿನ ಸಂಸ್ಥಾಪಕರಾದ ಎಂ ಮಹೇಶ್ ಹೆಗ್ಡೆ , ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಚೈತ್ರ ವಿ ಅಡಪ, ಗ್ರಾಮ ಪಂಚಾಯಿತಿಯ ಸದಸ್ಯರಾದ ಇಂದಿರಾ ಶೆಟ್ಟಿ , ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷರಾದ ಗಣೇಶ ಶೆಟ್ಟಿ ಮೊಳಹಳ್ಳಿ , ಮನಶಾಸ್ತ್ರಜ್ಞರಾದ ಗಿರೀಶ್ ಎಂ ಎನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆದರ್ಶ ಸ್ವಾಗತಿಸಿ , ಸಂತೋಷ್ ಕಾಂಚನ್ ಧನ್ಯವಾದ ಸಮರ್ಪಿಸಿದರು.ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.