
ಉಡುಪಿಯಲ್ಲಿ ಭಾರೀ ಪ್ರಮಾಣದ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣ ಪತ್ತೆ- ಇಬ್ಬರ ಬಂಧನ, 72 ಲಕ್ಷ ಮೊತ್ತದ ಗಾಂಜಾ ಮತ್ತಿತರ ಸೊತ್ತು ವಶ
11/09/2025 01:00 PM
ಉಡುಪಿ: ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಪಾರ ಮೌಲ್ಯದ ಗಾಂಜಾವನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಇಂದು ಉಡುಪಿಯ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಲಾರಿಯನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಲಾರಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ.
ಮೈಸೂರಿನ ಗಣೇಶ (38 )ಮತ್ತು ಆಂಧ್ರ ಪ್ರದೇಶ ಮೂಲದ ಗೋಪಾಲ ರೆಡ್ಡಿ( 43) ಬಂಧಿತರು. ಆರೋಪಿಗಳಿಂದ 65 ಕಿಲೋ ಗಾಂಜಾ , ನಗದು ರೂ. 1520 ,ಮೊಬೈಲ್ ಗಳು ಮತ್ತು ಸಾಗಾಟ ಮಾಡಿದ ಟ್ರಕ್... ಇವುಗಳ ಒಟ್ಟು ಮೌಲ್ಯ ಸುಮಾರು 72,21,520 ರೂ.ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 101/2025 ಕಲಂ: 8(c), 20 (b) (ii), (C) NDPS Act 1985 ರಂತೆ ಪ್ರಕರಣ ದಾಖಲಾಗಿದೆ.