
ಕಾಪು : ಸೆಪ್ಟೆಂಬರ್ 3 ರಂದು ಕಾಪುವಿನಲ್ಲಿ ಧರ್ಮಸ್ಥಳ ದೇಗುಲದ ಮೇಲಿನ ಅವಹೇಳನ ಖಂಡಿಸಿ ಜನಾಗ್ರಹ ಸಭೆ
ಕಾಪು :ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಮತ್ತು ಅವಹೇಳನ ಖಂಡಿಸುವ ಸಲುವಾಗಿ ಸೆಪ್ಟೆಂಬರ್ 3 ರಂದು ಕಾಪು ಶ್ರೀ ಹಳೇ ಮಾರಿಗುಡಿಯಲ್ಲಿ ಧರ್ಮಾತೀತವಾಗಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಜನಾಗ್ರಹ ಸಭೆ ನಡೆಸಿ ನಂತರ ಸರ್ವಿಸ್ ರಸ್ತೆಯ ಮೂಲಕ ಜಾಥಾ ನಡೆಸಿ ತಹಶಿಲ್ದಾರರ ಕಚೇರಿಗೆ ತೆರಳಿ ಸರ್ಕಾರಕ್ಕೆ ಸ್ವಯಂಪ್ರೇರಿತ ವಾಗಿ ಅಪಪ್ರಚಾರ ಮಾಡುವವರ ಮತ್ತು ಅವಹೇಳನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ಪ್ರಮುಖರಾದ ದಯಾನಂದ ಹೆಜಮಾಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಭೆಯ ಪ್ರಮುಖ ದಿಕ್ಸೂಚಿ ಭಾಷಣವನ್ನು ವಸಂತ ಗಿಳಿಯಾರು,ದಾಮೋದರ ಶರ್ಮ,ಸಹನಾ ಕುಂದರ್ ನಡೆಸಲಿದ್ದಾರೆ.ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಲಿದ್ದು,ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನವೀನ್ ಅಮೀನ್ ಶಂಕರಪುರ,ದೇವದಾಸ್ ಹೆಬ್ಬಾರ್,ಸತ್ಯೆಂದ್ರ ಪೈ,ಉದಯ ಶೆಟ್ಟಿ ಇನ್ನಾ,ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.