
ಉಡುಪಿ: ಸೆ.18 ರಂದು "ಮದ್ಯ ಮತ್ತು ಮಾದಕ ದ್ರವ್ಯ ವ್ಯಸನ" ದ ಕುರಿತು ಉಚಿತ ನೇರ ಪೋನ್ ಇನ್ ಕಾರ್ಯಕ್ರಮ
ಉಡುಪಿ: ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಇದರ ವತಿಯಿಂದ ಪ್ರತಿ ಗುರುವಾರ ಸಂಜೆ 7:00 ರಿಂದ 8:00 ರ ವರೆಗೆ “ಮದ್ಯ ಮತ್ತು ಮಾದಕ ದ್ರವ್ಯ ವ್ಯಸನ” ದ ಕುರಿತು “ಉಚಿತ ನೇರ ಪೋನ್ ಇನ್ ಕಾರ್ಯಕ್ರಮ” ನಡೆಯುತ್ತಿದೆ. ದಿನಾಂಕ 18-09-2025 ಸಂಚಿಕೆ 87ರ ಸಂಪನ್ಮೂಲ ವ್ಯಕ್ತಿಯಾಗಿ ದೀಪಶ್ರೀ , (ಆಪ್ತಸಮಾಲೋಚಕರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ) ಇವರು "ಮದ್ಯಪಾನ ಕುರಿತಾದ ತಪ್ಪು ನಂಬಿಕೆಗಳು ಮತ್ತು ನಿಜಾಂಶಗಳು” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೇಗೆ ?
ನಿಮ್ಮ ಯಾವುದೇ ಪೋನ್ ನಲ್ಲಿ ಸಂಜೆ 7 ಗಂಟೆಗೆ ಸರಿಯಾಗಿ 01725100960 ನಂಬರ್ ಗೆ ಕರೆ ಮಾಡಿ ಬಳಿಕ 7814434# ನಂಬರ್ ಅನ್ನು ಒತ್ತಿ.
ಈ ಕರೆಗೆ ಯಾವುದೇ ನೆಟ್ವರ್ಕ್ ನಿಂದಲೂ ಉಚಿತವಾಗಿ, ಯಾವುದೇ ಚಾರ್ಜಸ್ ಇಲ್ಲದೆಯೇ ಸಂಪರ್ಕಿಸಬಹುದು.
ನೀವೂ ಭಾಗವಹಿಸಿ, ಇತರಿಗೂ ತಿಳಿಸಿ ಎಂದು ಎ.ವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.