ನವದೆಹಲಿ: ಭಾರತದ ನೂತನ ಉಪರಾಷ್ಟ್ರಪತಿ ಸಿ. ಪಿ ರಾಧಾಕೃಷ್ಣನ್

ನವದೆಹಲಿ: ಭಾರತದ ನೂತನ ಉಪರಾಷ್ಟ್ರಪತಿ ಸಿ. ಪಿ ರಾಧಾಕೃಷ್ಣನ್

 


ನವದೆಹಲಿ: ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಸಿ.ಪಿ. ರಾಧಾಕೃಷ್ಣನ್ 452 ಮತಗಳನ್ನು ಪಡೆದಿದ್ದಾರೆ. ಮಾಜಿ ಮಹಾರಾಷ್ಟ್ರ ರಾಜ್ಯಪಾಲರಾದ ಸಿ.ಪಿ. ರಾಧಾಕೃಷ್ಣನ್ ಅವರು ಮೊದಲ ಸುತ್ತಿನಲ್ಲೇ 452 ಮತಗಳನ್ನು ಗಳಿಸಿದರು. ಅವರ ಎದುರಾಳಿಯಾಗಿದ್ದ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರು 300 ಮತಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ಜಗದೀಪ್ ಧನ್‌ಕರ್‌ ರಾಜೀನಾಮೆ ಬಳಿಕ ತೆರವಿದ್ದ ಉಪರಾಷ್ಟ್ರಪತಿ ಹುದ್ದೆಗೆ ಇಂದು (ಸೆ.9 ರಂದು) ಚುನಾವಣೆ ನಡೆಯಿತು. ಸಂಸತ್ ಭವನದಲ್ಲಿ ಮತದಾನ ನಡೆದಿದ್ದು ಎನ್​ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಮತ್ತು ಇಂಡಿ ಒಕ್ಕೂಟದ ಅಭ್ಯರ್ಥಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನಡುವೆ ನೇರ ಸ್ಪರ್ಧೆ ಇತ್ತು. ಜಗದೀಪ್ ಧನ್ಖರ್ ಜುಲೈ 21ರಂದು ಅನಾರೋಗ್ಯ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದರು. ಮತದಾನ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ ಸಂಜೆ 5 ಗಂಟೆಯವರೆಗೆ ನಡೆಯಿತು. ಎಣಿಕೆ ಸಂಜೆ 6 ಗಂಟೆಗೆ ಪ್ರಾರಂಭವಾಗಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

Ads on article

Advertise in articles 1

advertising articles 2

Advertise under the article