
ಉಡುಪಿ: ಅಮೆರಿಕಾದಲ್ಲಿ ಶಾಸಕಾಂಗ ಸಮ್ಮೇಳನದಲ್ಲಿ ಭಾಗವಹಿಸಿರುವುದು ಅತ್ಯಂತ ಹೆಮ್ಮೆಯಾಗಿದೆ- ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ
06/08/2025 09:06 AM
ಉಡುಪಿ: ಅಮೆರಿಕಾದ ಬೋಸ್ಟನ್ ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ರಾಜ್ಯ ಶಾಸಕಾಂಗ ಸಮ್ಮೇಳನದಲ್ಲಿ ಭಾಗವಹಿಸಿರುವುದು ಅತ್ಯಂತ ಹೆಮ್ಮೆಯಾಗಿದೆ ಎಂದು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದ ಮತದಾರರ ಶುಭಾಶೀರ್ವಾದಿಂದ ಈ ಸಮ್ಮೇಳವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದು, ಸಮ್ಮೇಳದಲ್ಲಿ ನಡೆದ ಎಲ್ಲಾ ಕಾರ್ಯಾಗಾರಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗಿಯಾಗಿದ್ದೇನೆ.
ರಾಜ್ಯ ಶಾಸಕರ ರಾಷ್ಟ್ರೀಯ ಸಮಾವೇಶ ಹಾಗೂ ರಾಷ್ಟ್ರೀಯ ಶಾಸಕರ ಸಮಾವೇಶ (ಎನ್‌ಎಲ್‌ಸಿ, ಭಾರತ) ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಭಾರತೀಯ ಶಾಸಕರ ನಿಯೋಗವು ಪಾಲ್ಗೊಂಡಿದ್ದು, ಭಾರತದ 24 ರಾಜ್ಯಗಳ, 21 ರಾಜಕೀಯ ಪಕ್ಷಗಳ 130ಕ್ಕೂ ಹೆಚ್ಚು ಶಾಸಕರು, ವಿಧಾನಪರಿಷತ್ತಿನ ಸದಸ್ಯರು ಈ ಐತಿಹಾಸಿಕ ನಿಯೋಗದ ಭಾಗವಾಗಿದ್ದಾರೆ.