ಉಡುಪಿ: ಸೌಂದರ್ಯ ತಜ್ಞರ ಕಾರ್ಯಗಾರ- ಜಿಲ್ಲೆಯ 300  ಕ್ಕಿಂತಲೂ ಹೆಚ್ಚು ಸೌಂದರ್ಯ ತಜ್ಞೆಯರು ಭಾಗಿ

ಉಡುಪಿ: ಸೌಂದರ್ಯ ತಜ್ಞರ ಕಾರ್ಯಗಾರ- ಜಿಲ್ಲೆಯ 300 ಕ್ಕಿಂತಲೂ ಹೆಚ್ಚು ಸೌಂದರ್ಯ ತಜ್ಞೆಯರು ಭಾಗಿ

 


ಉಡುಪಿ: ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸೌಂದರ್ಯ ತಜ್ಞೆಯರು ಸೇರಿಕೊಂಡು ಉಡುಪಿಯ ಕಿಡಿಯೂರಿನ ಅನಂತ ಶಯನ ಸಭಾಭವನದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಮಂಗಳವಾರದಂದು ಆಯೋಜಿಸಿದರು.

ಈ ಕಾರ್ಯಾಗಾರವನ್ನು ಉಡುಪಿಯ ಹಿರಿಯ ಸೌಂದರ್ಯ ತಜ್ಞೆಯರಾದ ಎಡ್ನ ಜತ್ತನ್ನ, ಜಯಶ್ರೀ ಭಂಡಾರಿ, ಲತಾ ವಾದಿರಾಜ್, ಶರ್ಲಿ ಅಮ್ಮನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು..

ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ಸೌಂದರ್ಯ ತಜ್ಞ ಮನು ಮುರಳೀಧರ್ ರವರು ಆದುನಿಕ ವಿಧಾನದ ಮೇಕಪ್ ಗಳ ಬಗ್ಗೆ ಒಂದು ದಿನ ವಿವರವಾಗಿ ತಿಳಿಸಿಕೊಟ್ಟರು.

ಕಾರ್ಯಾಗಾರದಲ್ಲಿ ಉಡುಪಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ 300  ಕ್ಕಿಂತಲೂ ಹೆಚ್ಚು ಸೌಂದರ್ಯ ತಜ್ಞೆಯರು ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದರು.ಕಾರ್ಯಕ್ರಮವನ್ನು ರೋಸ್ ಬ್ಯೂಟಿ ಪಾರ್ಲರ್ ಮಾಲಕಿ ಎಡ್ನ ಜತ್ತಣ್ಣ, ಲಕ್ಷ್ಮಿ ಬ್ಯೂಟಿ ವರ್ಲ್ಡ್, ರೋಸ್ ಕಾಸ್ಮೆಟಿಕ್ಸ್ , ಪಟೇಲ ಕುಂದಾಪುರ ಅವರುಗಳು ಜಂಟಿಯಾಗಿ ಕಾರ್ಯಾಗಾರವನ್ನು ಆಯೋಜಿಸಿದ್ದರು.

Ads on article

Advertise in articles 1

advertising articles 2

Advertise under the article