
ಮಂಗಳೂರು: ಡಾ.ಶ್ವೇತಾ ಕಾಮತ್ ಅವರಿಗೆ ಮಿಸೆಸ್ ಇಂಡಿಯಾ ಗ್ಲ್ಯಾಮರಸ್ ರೋಲ್ ಮಾಡೆಲ್ ಪ್ರಶಸ್ತಿ
05/08/2025 01:56 PM
ಮಂಗಳೂರು: ಮಂಗಳೂರಿನ ವೈದ್ಯೆ ,ಮೂವರು ಮಕ್ಕಳ ತಾಯಿ ಡಾ.ಶ್ವೇತಾ ಕಾಮತ್ ಅವರು ಪ್ರತಿಷ್ಠಿತ ಮಿಸೆಸ್ ಇಂಡಿಯಾ ಗ್ಲ್ಯಾಮರಸ್ ರೋಲ್ ಮಾಡೆಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.ಬಳಿಕ ಅಮೆರಿಕಾದ ಟೆನ್ನೆಸ್ಸೀಯಲ್ಲಿ ನಡೆದ ಮಿಸೆಸ್ ಇಂಟರ್ ನ್ಯಾಶನಲ್ ಪ್ರಶಸ್ತಿಯಲ್ಲಿ ಇವರು ಭಾರತವನ್ನು ಪ್ರತಿನಿಧಿಸಿದ್ದು ಇನ್ನೊಂದು ಹೆಗ್ಗಳಿಕೆ. ಜಾಗತಿಕ ಮಟ್ಟದಲ್ಲಿ 'Save the Girl Child' ಎಂಬ ಧ್ಯೇಯವಾಕ್ಯದೊಂದಿಗೆ ಅವರು ಈ ಸಾಧನೆ ಮಾಡಿದ್ದಾರೆ.ಕಳೆದ 16 ವರ್ಷಗಳಿಂದ ವೃತ್ತಿಯಲ್ಲಿ ವೈದ್ಯೆಯಾಗಿ ,ಮಾಡೆಲಿಂಗ್ ನ್ನು ಪ್ರವೃತ್ತಿಯಾಗಿ ತೆಗೆದುಕೊಂಡು ನಿರಂತರವಾಗಿ ಈ ಕ್ಷೇತ್ರದಲ್ಲಿ ಹಂತಹಂತವಾಗಿ ಈ ಸಾಧನೆ ಮಾಡಿದ್ದಾರೆ. ಜೊತೆಗೆ ಈ ಕ್ಷೇತ್ರದ ಅಸಂಖ್ಯ ಮಹಿಳೆಯರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.