
ಉಡುಪಿ: ನೂರಾರು ವಿದ್ಯಾರ್ಥಿಗಳಿಗೆ ಬೆಳಕಾದ ವಿದ್ಯಾಪೋಷಕ್ ಗೆ ಸಾರ್ಥಕ ಗಳಿಗೆ- ಒಂದು ತಿಂಗಳ ವೇತನ ದೇಣಿಗೆಯಾಗಿ ನೀಡಿದ ಹಫೀಝಾ
ಉಡುಪಿ: ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಸಮವಸ್ತ್ರ ಮತ್ತು ಪುಸ್ತಕಗಳನ್ನು ಉಚಿತವಾಗಿ ನೀಡುತ್ತವೆ. ಮುಖ್ಯವಾಗಿ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲಿ ಎಂಬುದು ಇದರ ಹಿಂದಿರುವ ಉದ್ದೇಶ.ಅಂತಹದ್ದೇ ಒಂದು ಸಂಸ್ಥೆ ವಿದ್ಯಾ ಪೋಷಕ್. ಈ ಸಂಸ್ಥೆ ನೂರಾರು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ತಂದಿದೆ.ಇಂತಹ ವಿದ್ಯಾ ಪೋಷಕ್ ನೆರವಿನಿಂದ ಶಿಕ್ಷಣ ಪಡೆದಿದ್ದವರು ವಿದ್ಯಾರ್ಥಿನಿ ,ಉಡುಪಿಯ
ಚಿಟ್ಪಾಡಿಯ ಹಫೀಝಾ ಮಾಗಿ . ಇವರು ಎಂ.ಬಿ.ಎ. ಮುಗಿಸಿ, ಮುಂಬೈನ ಹ್ಯುರೋನ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದ್ದಾರೆ. ಉದ್ಯೋಗಕ್ಕೆ ಸೇರಿ ತಮ್ಮ ಮೊದಲ ತಿಂಗಳ ಸಂಬಳವನ್ನು ತನಗೆ ಹಿಂದೆ ಉಪಕಾರ ಮಾಡಿದ್ದ ವಿದ್ಯಾ ಪೋಷಕ್ ಸಂಸ್ಥೆಗೆ ನೀಡಿದ್ದಾರೆ. ವಿದ್ಯಾ ಪೋಷಕ್ ಕಚೇರಿಗೆ ಬಂದು ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರಿಗೆ ಮೊದಲ ತಿಂಗಳ ಸಂಬಳ ದೇಣಿಗೆಯಾಗಿ ನೀಡುತ್ತಾ
"ನಾನು ವಿದ್ಯಾಪೋಷಕ್ ಸಂಸ್ಥೆಯಿಂದ ಉಪಕೃತಳು. ಈ ದಿನಕ್ಕಾಗಿ ಕಾಯುತ್ತಿದ್ದೆ ಸರ್" ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಹಫೀಝಾ. 'ಇದು ನಮಗೆ ಧನ್ಯತೆಯ ಕ್ಷಣ. ಉಡುಪಿ ಕಲಾರಂಗದ ನಿಸ್ವಾರ್ಥ ಸೇವೆಗೆ ,ವಿದ್ಯಾರ್ಥಿನಿಯ ಉಪಕಾರ ಸ್ಮರಣೆ ಹಿಡಿದ ಕನ್ನಡಿ' ಎಂದು ಮರಲಿ ಕಡೆಕಾರ್ ಹೇಳಿಕೊಂಡಿದ್ದಾರೆ.