
ಉಡುಪಿ: ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ- ಉಡುಪಿಯಲ್ಲಿ ಬಸ್ ಸಂಚಾರ ವಿರಳ
05/08/2025 04:38 AM
ಉಡುಪಿ: ಸಾರಿಗೆ ಇಲಾಖೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದಿಂದಾಗಿ ಮಂಗಳವಾರ ಬೆಳಿಗ್ಗೆ ಉಡುಪಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಸೇವೆಯಲ್ಲಿ ವ್ಯತ್ಯಯ ಕಂಡುಬಂತು.
ಉಡುಪಿ ಡಿಪೋದಿಂದ ಬಸ್ಸುಗಳು ಹೊರಟಿವೆಯಾದರೂ ಇತರ ಭಾಗದಿಂದ ಉಡುಪಿಗೆ ಬರುವ ಬಸ್ ಗಳಲ್ಲಿ ವ್ಯತ್ಯಯವಾಗಿದೆ. ಬೆರಳೆಣಿಕೆ ಬಸ್ ಗಳಿದ್ದ ಕಾರಣ ಆ ಬಸ್ ಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಂಡಿದ್ದರು. ಭಟ್ಕಳದಿಂದ ಉಡುಪಿಗೆ ಬಸ್ಸುಗಳು ಬಂದಿಲ್ಲ ಎನ್ನುತ್ತಾರೆ ಇಲ್ಲಿನ ಸಿಬಂದಿ. ತಂಗುದಾಣದಲ್ಲಿ ಬೆಳಗ್ಗಿನ ಹೊತ್ತು ತುಸು ಪ್ರಯಾಣಿಕರು ಆಗಮಿಸಿದ್ದರಾದರೂ ಸಮಯಕ್ಕೆ ಸರಿಯಾಗಿ ಬಸ್ ಗಳು ಇಲ್ಲದ ಕಾರಣ ವಾಪಾಸು ಹಿಂತಿರುಗಿದ ಘಟನೆ ನಡೆಯಿತು.