
ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಕೇರ್ ಒಪಿಡಿ ಸೇವೆ ಪ್ರಾರಂಭ
05/08/2025 05:57 AM
ಉಡುಪಿ: ಉಡುಪಿಯ ಪ್ರಸಿದ್ಧ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಕೇರ್ ಒಪಿಡಿ ಸೇವೆ ಪ್ರಾರಂಭಗೊಳ್ಳುತ್ತಿದೆ.ಆಗಸ್ಟ್ 16 ರಂದು ಈ ಸೇವೆ ಲಭ್ಯ ಇದೆ.ಖ್ಯಾತ ವೈದ್ಯ ಡಾ.ರಂಜನ್ ಶೆಟ್ಟಿ ಅವರು , ಅಗತ್ಯ ಇರುವ ರೋಗಿಗಳಿಗೆ ಈ ಸೇವೆ ನೀಡಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಒಂದು ದಿನ ಮಾತ್ರ ಈ ಸೇವೆ ಇದ್ದು ಸೆಪ್ಟೆಂಬರ್ ತಿಂಗಳ ನಂತರ ಪ್ರತೀ ತಿಂಗಳು ಎರಡು ಬಾರಿ ಈ ಸೇವೆ ಲಭ್ಯವಿರಲಿದೆ. ಮುಂದಿನ ದಿನಾಂಕವನ್ನು ಶೀಘ್ರ ತಿಳಿಸಲಾಗುತ್ತದೆ.*