
ಕಾಪು:ಉಪ್ಪು ನೀರು ತಡೆಗಟ್ಟಲು ತುರ್ತು ಕಾಮಗಾರಿ ಕೈಗೊಳ್ಳುವಂತೆ ಸದನದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಒತ್ತಾಯ
ಕಾಪು:ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 26 ಕಿಲೋ ಮೀಟರ್ ಉದ್ದದ ಸಮುದ್ರ ತೀರ ಇದ್ದು ಪ್ರಮುಖ ನದಿಗಳಾದ ಶಾಂಭವಿ, ಕಾಮಿನಿ, ಪಿನಾಕಿನಿ, ಪಾಪ ನಾಶಿನಿ ನದಿಗಳು ಹುಣ್ಣಿಮೆ ಹಾಗೂ ಅಮಾವಾಸ್ಯೆಯ ಸಂದರ್ಭದಲ್ಲಿ ಹಿಮ್ಮುಖವಾಗಿ ಹರಿಯುವುದರಿಂದ ತೋಟಗಳಿಗೆ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗುವುದರಿಂದ ವಿಶೇಷವಾಗಿ ಮಟ್ಟು ಭಾಗದಲ್ಲಿ ಬೆಳೆಯುತ್ತಿರುವ GI ಟ್ಯಾಗ್ ಹೊಂದಿರುವ ಮಟ್ಟುಗುಳ್ಳ (ಬದನೆಕಾಯಿ) ಬೆಳೆಗೆ ಉಪ್ಪು ನೀರಿನ ಹರಿವಿನಿಂದ ಸಮಸ್ಯೆ ಇದೆ. ಈ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯ ಖಾರ್ಲ್ಯಾಂಡ್ ಯೋಜನೆಯಡಿ ಉಪ್ಪು ನೀರು ತಡೆಗಟ್ಟಲು ತುರ್ತು ಕಾಮಗಾರಿ ಕೈಗೊಳ್ಳುವಂತೆ ಹಾಗೂ ಕಾಪು ಭಾಗದ ಇನ್ನಿತರ ಪ್ರದೇಶಗಳಲ್ಲಿ ನದಿ ದಂಡೆಗಳ ಕೊರತೆದಿಂದ ಕೃಷಿ ಬೆಳೆಗಳಿಗೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ವಾಸ್ತವ್ಯದ ಮನೆಗಳಿಗೆ ಇದರಿಂದ ಹೆಚ್ಚಿನ ಹಾನಿ ಉಂಟಾಗುತ್ತಿದ್ದು ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಅನುದಾನ ನೀಡುವಂತೆ ಸದನದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸಣ್ಣ ನೀರಾವರಿ ಇಲಾಖಾ ಸಚಿವರಿಗೆ ಒತ್ತಾಯಿಸಿದರು.ಸಣ್ಣ ನೀರಾವರಿ ಇಲಾಖಾ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.