
ಉಡುಪಿ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಮನವಿ ಸಲ್ಲಿಸಿದ ಕರವೇ
ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರ ಆದೇಶದಂತೆ ಉಪಮುಖ್ಯಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕೆಂಪು ಕಲ್ಲು ಮತ್ತು ಮರಳಿನ ನೀತಿಯನ್ನು ಕೂಡಲೇ ಸರಳಿಕರಣ ಗೊಳಿಸುವಂತೆ ಮನವಿ ಮಾಡಲಾಯಿತು.ಮನವಿಯಲ್ಲಿ ಒಂದು ವೇಳೆ ಒಂದು ವಾರದ ಒಳಗಾಗಿ ಸರಳೀಕರಣಗೊಳಿಸದಿದ್ದರೆ ಜಿಲ್ಲಾಧಿಕಾರಿಯವರ ಕಚೇರಿಯ ಬಳಿ ಅಹೋರಾತ್ರಿ ಧರಣಿ ಮಾಡುವುದಾಗಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅರಾ ಪ್ರಭಾಕರ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಅನಿಲ್ ಪೂಜಾರಿ ,ಪ್ರಸಾದ್ ಪೂಜಾರಿ ,ಉಪಾಧ್ಯಕ್ಷ ಶಬೂದಿನ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ,ಹೇಮಂತ್ಕು ಮಾರ್ ಜಿಲ್ಲಾ ಪ್ರಧಾನ ಸಂಚಾಲಕರಾದ ಕಿರಣ್ ಪಿಂಟೊ ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಸುಜಿತ್ ಡಸೋಜ, ಜಿಲ್ಲಾ ಜಾಲತಾಣ ಸಂಚಾಲಕರಾದ ಪ್ರವೀಣ್ ಡಿಕ್ರೋಜ್ ಸಂಚಾಲಕರಾದ ಸುಧಾಕರ ಕಲ್ಮಾಡಿ, ನಗರ ಅಧ್ಯಕ್ಷ ಅಜರುದ್ದಿನ್ ಫೆರಂಪಳ್ಳಿ ಮಹಿಳಾ ಉಪಾಧ್ಯಕ್ಷ ಅಶ್ವಿನಿ ನಾಯಕ್ಕ ಕರವೇ ಮಹಿಳಾ ಮುಖಂಡರಾದ ಕವಿತಾ ಹೇಮಂತ್ ಕಮಾರ್ ಪೂರ್ಣಿಮಾ ಕೋಟ್ಯಾನ್ , ಕಾವೇರಿ ಗಾಣಿಗ ಹಾಗೂ ಸುಷ್ಮಾ ಗೌಡ ಮೊದಲಾದವರು ಉಪಸ್ಥಿತರಿದ್ದರು.