
ಉಡುಪಿ: ಸ್ನೇಹಿತರಿಂದಲೇ ವ್ಯಕ್ತಿಯ ಬರ್ಬರ ಕೊಲೆ
13/08/2025 04:14 AM
ಉಡುಪಿ: ವ್ಯಕ್ತಿಯೋರ್ವನನ್ನು ಸ್ನೇಹಿತರೇ ಮನೆಗೆ ನುಗ್ಗಿ ಬರ್ಬರವಾಗಿ ಕೊಲೆಗೈದ ಘಟನೆ ಪುತ್ತೂರಿನ ಸುಬ್ರಹ್ಮಣ್ಯ ನಗರದ ಲಿಂಗೋಟ್ಟುಗುಡ್ಡೆಯಲ್ಲಿ ನಡೆದಿದೆ.
ವಿನಯ್ ದೇವಾಡಿಗ (40) ಕೊಲೆಯಾದ ವ್ಯಕ್ತಿ. ವಿನಯ್ ಎಂದಿನಂತೆ ಮನೆಯಲ್ಲಿ ಊಟ ಮಾಡಿ ಮಲಗಿದ್ದರು. ಮಂಗಳವಾರ ರಾತ್ರಿ ಸುಮಾರು 11.45 ಕ್ಕೆ ಬಂದ ದುಷ್ಕರ್ಮಿಗಳು ಜೋರಾಗಿ ಮನೆಯ ಬಾಗಿಲು ಬಡಿದ್ದಾರೆ. ಭಯಗೊಂಡ ಪತ್ನಿ ಮನೆಯ ಬಾಗಿಲು ತೆರೆದಿದ್ದು, ವಿನಯ್ ಇದ್ದಾನಾ ಎಂದು ಕೇಳಿದ ಮೂವರು ದುಷ್ಕರ್ಮಿಗಳು ತಕ್ಷಣವೇ ಮಾರಕಾಸ್ತ್ರದೊಂದಿಗೆ ಬೆಡ್ ರೂಮ್ ಗೆ ನುಗ್ಗಿ ವಿನಯ್ ಗೆ ಹಲ್ಲೆ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಪತ್ನಿಗೂ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡ ವಿನಯ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.