
ಕೊಲ್ಲೂರು: ಫೇಸ್ ಬುಕ್ ನಲ್ಲಿ ಕೋಮು ಸೌಹಾರ್ದ ಕೆಡಿಸುವ ಪೋಸ್ಟ್- ಪ್ರಕರಣ ದಾಖಲು
24/08/2025 04:47 AM
ಕೊಲ್ಲೂರು: ಫೇಸ್‌ಬುಕ್ ಖಾತೆಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಪೋಸ್ಟ್ ಹಾಕಿರುವ ಬಗ್ಗೆ ಜಗದೀಶ ಉಡುಪ ಎಂಬವರ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಲ್ಲೂರು ಠಾಣೆಯ ಸೋಷಿಯಲ್ ಮೀಡಿಯ ಮಾನಿಟರ್ ಸೆಲ್ ಸಿಬಂದಿಯಾಗಿರುವ ಸಂತೋಷ್ ಕುಲಾಲ್ ಅವರು ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುತ್ತಿರುವಾಗ ಜಗದೀಶ ಉಡುಪ ಹೆಸರಿನ ಫೇಸ್‌ಬುಕ್ ಖಾತೆಯ ಲಿಂಕ್‌ನ ಒಂದು ಪೋಸ್ಟ್‌ನಲ್ಲಿ "ರಾಜ್ಯದಲ್ಲಿ ಏನಾಗುತ್ತಿದೆ, ದಸರಾ ಉದ್ಘಾಟನೆಯು ಬಾನು ಮುಸ್ತಾಕ್‌ರಿಂದ ಅಂತೆ, ಹಿಂದೂ ಧರ್ಮದ ನಾಡಹಬ್ಬ ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆಗೆ ಹಿಂದೂಗಳಿಲ್ಲವೇ, ಕೇವಲ ಒಂದೇ ಒಂದು ಸಮುದಾಯದ ಓಲೈಕೆಗೆ ಶ್ರೇಷ್ಠ ಹಿಂದೂ ಧರ್ಮದ ಅವಹೇಳನ ಮಾಡುವುದು ಖಂಡಿತಾ ತಪ್ಪು, ಒಂದು ವೇಳೆ ಮಾಡಿಸಿದರೆ ಅದರ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ' ಎಂದು ಪ್ರಚೋದನಕಾರಿ ಹಾಗೂ ಕೋಮುಸೌಹಾರ್ದಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ಪೋಸ್ಟ್ ಮಾಡಿರುತ್ತಾರೆ ಎಂಬ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ