
ಕಾರ್ಕಳ:ರಾಷ್ಟ್ರೀಯ ಸ್ಕೂಲ್ ಗೇಮ್ಸ್, ಬಾಲಕಿಯರ ವಾಲಿಬಾಲ್ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕಾರ್ಕಳ: ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್ ಆಯೋಜಿಸುವ 15 ವರ್ಷ ವಯೋಮಿತಿಯ ಒಳಗಿನ ಶಾಲಾ ಮಕ್ಕಳ ಬಾಲಕಿಯರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕರ್ನಾಟಕದ ವಾಲಿಬಾಲ್ ತಂಡದಲ್ಲಿ ಕಾರ್ಕಳ ಕ್ರೈಸ್ತ ಕಿಂಗ್ ಆಂಗ್ಲ ಮಾದ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ಸ್ಥಾನವನ್ನು ಪಡೆದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಟಗಾರು ಭಾಗವಹಿಸಿದ್ದು ಕರ್ನಾಟಕದಿಂದ ಆಯ್ಕೆಯಾದ ಒಟ್ಟು ಎಂಟು ಆಟಗಾರರಲ್ಲಿ ಶಗುನ್ ಎಸ್ ವರ್ಮ ಹೆಗ್ಡೆ ಉಡುಪಿ ಜಿಲ್ಲೆಯ ಏಕೈಕ ಆಟಗಾರ್ತಿಯಾಗಿದ್ದಾರೆ.
ಈ ತಿಂಗಳ 28 ರಿಂದ ಮೂರು ದಿನಗಳ ಕಾಲ ಪುಣೆಯಲ್ಲಿ ನಡೆಯುವ ರಾಷ್ಟ್ರಮಟ್ಟದ ಶಿಬಿರದಲ್ಲಿ ವಿಶ್ವ ತಂಡದ ಆಯ್ಕೆ ನಡೆಯಲಿದ್ದು ಅಲ್ಲಿ ಆಯ್ಕೆಯಾದ ಆಟಗಾರ್ತಿಯರು ಡಿಸೆಂಬರ್ 4 ರಿಂದ 13 ವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯುವ ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕುಮಾರಿ ಶಗುನ್ ಎಸ್. ವರ್ಮ ಹೆಗ್ಡೆ ಶೃತಿ ಮತ್ತು ಸಂದೇಶ್ ವರ್ಮ ದಂಪತಿ ಪುತ್ರಿಯಾಗಿದ್ದು ಇವರು ಜೋಡುರಸ್ತೆ ಕೊರಚೊಟ್ಟು ಕ್ರೀಡಾಂಗಣದಲ್ಲಿ ಸಂತೋಷ್ ಡಿ'ಸೋಜಾ, ಜೀವನ್ ಡಿ' ಸಿಲ್ವಾ, ಹಾಗೂ ಜೈರಾಜ್ ಪೂಜಾರಿ ಇವರಿಂದ ಕ್ರೀಡಾ ತರಬೇತಿಯನ್ನು ಪಡೆದಿರುತ್ತಾರೆ.