ಹಿರಿಯಡ್ಕ: ಕುರಲ್ ರೈತ ಉತ್ಪಾದಕ ಕಂಪನಿಯ 2024-25 ರ ವಾರ್ಷಿಕ ಮಹಾಸಭೆ

ಹಿರಿಯಡ್ಕ: ಕುರಲ್ ರೈತ ಉತ್ಪಾದಕ ಕಂಪನಿಯ 2024-25 ರ ವಾರ್ಷಿಕ ಮಹಾಸಭೆ

 


ಹಿರಿಯಡ್ಕ: ಕುರಲ್ ರೈತ ಉತ್ಪಾದಕ ಕಂಪನಿಯ 2024-25 ರ ವಾರ್ಷಿಕ ಮಹಾಸಭೆಯು ಹಿರಿಯಡ್ಕದ ಸುರಭಿ ಬಾಂಕ್ವೆಟ್ ಹಾಲ್ ನಲ್ಲಿ ಜರುಗಿತು. 

ರೈತರ ನಿರಂತರವಾದ ಸಹಕಾರದಿಂದ ರೈತ ಉತ್ಪಾದಕ ಕಂಪೆನಿಯು ಅತ್ಯಂತ ಸುಗಮವಾಗಿ ನಡೆಯುತ್ತಿರುವುದಾಗಿ ಅಧ್ಯಕ್ಷ  ಶಿವಾನಂದ ನಾಯಕ್ ರವರು ಅಭಿಪ್ರಾಯಪಟ್ಟರು.

ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕರಾದ ಕುದಿ ಶ್ರೀನಿವಾಸ ಭಟ್ ರವರು ವೈಜ್ಞಾನಿಕವಾಗಿ ತೆಂಗು ಮತ್ತು ಅಡಕೆ ಬೆಳೆಯಲ್ಲಿನ ಸಮಗ್ರ ಅಭಿವೃದ್ಧಿ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ  ಸಂತೋಷ ಶೆಟ್ಟಿ ಸಾಂತ್ಯಾರು, ಗೌರವ ಸಲಹೆಗಾರರಾದ  ಸುಂದರ್ ಎಂ ಭಂಡಾರಿ ಮತ್ತು ಇತರ ನಿರ್ದೇಶಕರು ಉಪಸ್ಥಿತರಿದ್ದರು.ಸಂಸ್ಥೆಯ ಲೆಕ್ಕಾಧಿಕಾರಿ ಶ್ರೀಮತಿ ಚಿರಶ್ರೀ ಪ್ರಾರ್ಥಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಆದರ್ಶ್ ಕಾರ್ಯಕ್ರಮ ನಿರ್ವಹಿಸಿದರು.

Ads on article

Advertise in articles 1

advertising articles 2

Advertise under the article