ಉಡುಪಿ: ಭಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ- ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರೋಧ

ಉಡುಪಿ: ಭಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ- ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರೋಧ

 


ಉಡುಪಿ: ಕರ್ನಾಟಕ ರಾಜ್ಯದ ನಾಡದೇವತೆ ಚಾಮುಂಡೇಶ್ವರಿ ಮಾತೆಯ ದಸರಾ ಮಹೋತ್ಸವವನ್ನು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಒಪ್ಪದ ಓರ್ವ ಅನ್ಯ ಮತೀಯ ಮಹಿಳೆಯ ಮೂಲಕ ಉದ್ಘಾಟನೆ ನಡೆಸಲು ಮುಂದಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ನಡೆಸಿ ಷಡ್ಯಂತ್ರ ರೂಪಿಸಿದ ಹಿಂದೂ ವಿರೋಧಿ ಶಕ್ತಿಗಳಿಗೆ ಮಣಿದು ರಾಜ್ಯ ಸರಕಾರ ಈ ನಿರ್ಧಾರ ಮಾಡಿದಂತಿದೆ.

ಮೈಸೂರು ಒಡೆಯರ ಸಂಸ್ಥಾನದ ಆಳ್ವಿಕೆಯ ಕಾಲದಿಂದ ನಡೆಯುತ್ತಿರುವ ಮೈಸೂರು ಚಾಮುಂಡೇಶ್ವರಿಯ ದಸರಾ ಮಹೋತ್ಸವ ವಿಚಾರದಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ನಿರ್ಧಾರವನ್ನು ರಾಜ್ಯ ಸರಕಾರ ಪುನರ್ ಪರಿಶೀಲನೆ ಮಾಡಿ ದೇವಸ್ಥಾನದ ಪಾವಿತ್ರ್ಯತೆಗೆ ಪೂರಕವಾಗಿ ಯೋಗ್ಯ ವ್ಯಕ್ತಿಯಿಂದ ದಸರಾ ಉದ್ಘಾಟನೆ ಮಾಡಲಿ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article