
ಬೆಂಗಳೂರು: ಖಾಸಗಿ ಹೊಟೇಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ
12/08/2025 02:54 PM
ಬೆಂಗಳೂರು: ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಕಾಂಗ್ರೆಸ್ ಶಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಅಧಿವೇಶನದಲ್ಲಿ ಸರ್ಕಾರದ ಸಾಧನೆಯನ್ನು ಸಮರ್ಥವಾಗಿ ಮಂಡಿಸಬೇಕು ಮತ್ತು ವಿರೋಧ ಪಕ್ಷಗಳ ಆಧಾರ ರಹಿತ ಆರೋಪಗಳು ಹಾಗೂ ಸುಳ್ಳುಗಳನ್ನು ದಾಖಲೆ ಹಾಗೂ ಅಂಕಿ ಅಂಶಗಳ ಸಮೇತ ಸಮರ್ಥವಾಗಿ ಪ್ರಸ್ತಾಪಿಸಿ ಉತ್ತರ ನೀಡುವಂತೆ ವಿವರಿಸಿದರು.