ಪಡುಬಿದ್ರೆ:7 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಿದ ಪಡುಬಿದ್ರೆ ಪೊಲೀಸರು

 


ಪಡುಬಿದ್ರೆ: ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ :  110/2017 ಸಿಸಿ ನಂಬರ್ 801/2018 ಕಲಂ. 379,411 IPC ರಲ್ಲಿ ಆರೋಪಿಯಾಗಿರುವ  ಫೈರೋಜ್ ಖಾನ್ ಎಂಬಾತನನ್ನು ಪೊಲೀಸರು 7 ವರ್ಷಗಳ ಬಳಿಕ ಬಂಧಿಸಿದ್ದಾರೆ. ಆರೋಪಿ ಸುಮಾರು ಏಳು ವರ್ಷಗಳಿಂದ ನ್ಯಾಯಾಲಯಕ್ಕೆ  ಹಾಜರಾಗದೆ ತಲೆಮರೆಸಿಕೊಂಡಿದ್ದ. ಪಡುಬಿದ್ರೆ ಪೊಲೀಸ್  ಠಾಣೆ ಸಿಬ್ಬಂದಿಗಳಾದ  ದೇವರಾಜ್,  ರಾಘು ಶೆಟ್ಟಿಯವರು ಕೇರಳದ ಕ್ಯಾಲಿಕಟ್ ನಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.