ಉಡುಪಿ: ಸುಳ್ಳು ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸಿ ತಮ್ಮ ಸ್ವಾರ್ಥ ಸಾಧಿಸುವುದು ಬಿಜೆಪಿಯ ರಾಜ ಧರ್ಮ- ಅಶೋಕ್ ಕುಮಾರ್ ಕೊಡವೂರು

ಉಡುಪಿ: ಸುಳ್ಳು ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸಿ ತಮ್ಮ ಸ್ವಾರ್ಥ ಸಾಧಿಸುವುದು ಬಿಜೆಪಿಯ ರಾಜ ಧರ್ಮ- ಅಶೋಕ್ ಕುಮಾರ್ ಕೊಡವೂರು

 

ಉಡುಪಿ: ಸುಳ್ಳು ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸಿ ತಮ್ಮ ಸ್ವಾರ್ಥ ಸಾಧಿಸುವುದು ಬಿಜೆಪಿಯ ರಾಜ ಧರ್ಮ. ಇಂತಹ ಸುಳ್ಳಿನ ವಿರುದ್ಧ ಹೋರಾಡಿ ಜನರಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ ರಾಜಕೀಯದ ಸತ್ಯ ಧರ್ಮ.

ಆ ನೆಲೆಯಲ್ಲಿ  ಕಾಂಗ್ರೆಸ್ ಪಕ್ಷ ಜಿಲ್ಲೆಯಾದ್ಯಂತ ತನ್ನ ಎಲ್ಲ ಬ್ಲಾಕ್ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಸತ್ಯದರ್ಶನ ಕಾರ್ಯಕ್ರಮವನ್ನು ಆಯೋಜಿಸಿ ತನ್ನ ಪಕ್ಷದ ಸಾಧನೆ ಮತ್ತು ಬಿಜೆಪಿಯ ಸುಳ್ಳಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ರಾಜ್ಯದಲ್ಲಿ ಕಳೆದ ತನ್ನ ಅಸ್ಥಿರ ಆಡಳಿತದ ಅವಧಿಯಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳಲಾಗದೆ  ರಾಜ್ಯದ ಅಭಿವೃದ್ಧಿಗೆ ಕೊಕ್ಕೆ ಹಾಕಿದವರು ಯಾರು ಎನ್ನುವುದು ಈ ನಾಡಿನ ಜನರಿಗೆ ತಿಳಿದಿದೆ. ಕೇಂದ್ರದಲ್ಲಿ ತನ್ನದೇ ಸರಕಾರವಿದ್ದ ಹೊರತಾಗಿಯೂ ರಾಜ್ಯ ವಿದ್ಯುತ್ ನಿಗಮಕ್ಕೆ ಕಲ್ಲಿದ್ದಲು ಸರಬರಾಜು ಮಾಡಲಾಗದೆ  ನಷ್ಟ ಸರಿತೂಗಿಸಲು ವಿದ್ಯುತ್ ಬಿಲ್  ಏರಿಸಿದ್ದು, 9/11 ಏಕವಿನ್ಯಾಸ ನಕ್ಷೆ ಗಿದ್ದ ಗ್ರಾಮ ಪಂಚಾಯತ್ ಅಧಿಕಾರ ಕಿತ್ತುಕೊಂಡು ನಗರ ಪ್ರಾಧಿಕಾರಕ್ಕೆ  ಹಸ್ತಾಂತರಿಸಿದ್ದು, 94ಸಿ/ಸಿಸಿ, ಅಕ್ರಮ ಸಕ್ರಮ ಮರು ವಿಮರ್ಶೆಗೆ ಆದೇಶ, ವಿಧವಾ ವೇತನ, ವೃದ್ಧಾಪ್ಯ ವೇತನವೇ ಮೊದಲಾದ ಜನಪರ ಯೋಜನೆಗಳ ದುರುಪಯೋಗದ ಹೆಸರಲ್ಲೂ ಪರಿಶೀಲನೆಗೆ ಹಾಕಿ ತಡೆ ಹಿಡಿದದ್ದು... ಇವೆಲ್ಲ ಇದೇ ಬಿಜೆಪಿಯವರ ಈ ಹಿಂದಿನ ಸರಕಾರಿ ಆದೇಶದ ಜನವಿರೋಧಿ ಪ್ರಕ್ರಿಯೆಗಳು. ಹಿಂದಿನ ಸರಕಾರದ ಈ ಉದ್ದೇಶಿತ ತಪ್ಪುಗಳನ್ನು ಕಾನೂನಾತ್ಮಕವಾಗಿ ಸರಿಪಡಿಸುವ ನಿಟ್ಟಿನಲ್ಲಿ ವಿಳಂಬ ಸಹಜ. ಇದನ್ನು ಆಳುವ ಸರಕಾರದ ವೈಪಲ್ಯವೆಂದು ಪರಿಗಣಿಸಲಾಗದು ಎಂದು ಅವರು ಹೇಳಿದ್ದಾರೆ.

ಅದರೆ ಆರ್ಥಿಕತೆಯ ಅರ್ಥ ಅರಿಯದ ಬಿಜೆಪಿ ನಾಯಕರು ತಮ್ಮ ಶಾಸಕತ್ವದ ವೈಫಲ್ಯಗಳನ್ನು ಮರೆಮಾಚಲು ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಬೊಕ್ಕಸ ಬರಿದಾಗಿದ್ದು ಅಭಿವೃದ್ದಿ ಕೆಲಸಗಳ  ಅನುದಾನಕ್ಕೆ ಹಣವಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವುದು ವಿಷಾದನೀಯ. "ಕುಣಿಯಲು ಗೊತ್ತಿಲ್ಲದವ ಅಂಗಳ ಸರಿಯಿಲ್ಲ ವೆಂದ" ಎಂಬ ಗಾದೆ ಮಾತಿನಂತೆ ಸದಾ ರಾಜ್ಯ ಸರಕಾರದ ವಿರುದ್ಧ ಸಂಘರ್ಷದ ಹಾದಿ ಹಿಡಿದಿರುವ ಇಲ್ಲಿನ ಶಾಸಕರಿಗೆ  ಸರಕಾರದಿಂದ ಅನುದಾನ ಗಿಟ್ಟಿಸಿಕೊಂಡು ಜನಪರ ಕೆಲಸದ ಕಾರ್ಯಸಾಧನೆಯ ಶಕ್ತಿ ಇಲ್ಲ. ಆ ನೆಲೆಯಲ್ಲಿ ಸರಕಾರದ ಮೇಲೆ ವ್ಯರ್ಥಾರೋಪ ಮಾಡಿ ಕಾಲಕಳೆಯುತ್ತಿದ್ದಾರೆ ಎಂದು ಡಿಸಿಸಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article