
ಉಡುಪಿ: ನಗರ ಪೊಲೀಸರಿಂದ ಗುಂಡಿ ಬೈಲ್ ವಾರ್ಡ್ ನ ಜನತಾ ವ್ಯಾಯಾಮ ಶಾಲೆಯಲ್ಲಿ ಮನೆ ಮನೆ ಪೊಲೀಸ್ ಭೇಟಿ ಕಾರ್ಯಕ್ರಮ
27/07/2025 06:35 AM
ಉಡುಪಿ: ಗುಂಡಿ ಬೈಲ್ ವಾರ್ಡ್ ಗೆ ಸಂಬಂಧಪಟ್ಟಂತೆ ಮನೆ ಮನೆ ಪೊಲೀಸ್ ಭೇಟಿ ಕಾರ್ಯಕ್ರಮ ಇಂದು ಜನತಾ ವ್ಯಾಯಾಮ ಶಾಲೆಯಲ್ಲಿ ನಡೆಯಿತು.ಮುಖ್ಯವಾಗಿ ಕಳ್ಳತನ ನಡೆಯುವುದನ್ನು ತಡೆಗಟ್ಟಲು ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡುವ ಬಗ್ಗೆ ಗುಂಡಿ ಬೈಲ್ ವಾರ್ಡ್ ನ ಜನತಾ ವ್ಯಾಯಾಮ ಶಾಲೆಯಲ್ಲಿ ಪೊಲೀಸ್ ಮತ್ತು ಸಾರ್ವಜನಿಕರ ಸಮಾಲೋಚನೆ ನಡೆಯಿತು.
ಈ ಸಭೆಯಲ್ಲಿ ಗುಂಡಿಬೈ ಲ್ ವಾರ್ಡ್ ನ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾದರು.ಉಡುಪಿ ಡಿಎಸ್ಪಿ ,ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ ,ದೊಡ್ಡಣಗುಡ್ಡೆ ಮಸೀದಿ ಕಾರ್ಯದರ್ಶಿ ಖಾಸಿಂ ,ಕಾರ್ಯಕರ್ತ ಜುನೈದ್ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅವರ ದೂರು ದುಮ್ಮಾನಗಳನ್ನು ಮತ್ತು ಮನವಿಗಳನ್ನು ಸ್ವೀಕರಿಸಲಾಗುತ್ತದೆ. ಈ ಅರಿವು ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಠಾಣೆಯಿಂದ ರಚಿಸಲಾಗಿರುವ ತಂಡದಲ್ಲಿ ಪಿಐ/ಪಿಎಸ್‌ಐ, ಎಎಸ್‌ಐ, ಮಹಿಳಾ ಮತ್ತು ಪುರುಷ ಸಿಬಂದಿ ಇರಲಿದ್ದಾರೆ. ನಗರ ಠಾಣೆಯ 28, ಮಣಿಪಾಲ 45, ಬ್ರಹ್ಮಾವರ 30 ಮತ್ತು ಕೋಟದ 25 ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೂಲ ಉದ್ದೇಶವನ್ನು ತಿಳಿಸಲಾಗಿದೆ. ಈ ಕಾರ್ಯಕ್ರಮವು 4 ತಿಂಗಳವರೆಗೆ ಪ್ರತಿದಿನ ನಡೆಯಲಿದೆ.