
ಧರ್ಮಸ್ಥಳ SIT ತನಿಖೆ - ತನಿಖಾ ವರದಿ ಬರುವ ತನಕ ವೀರೇಂದ್ರ ಹೆಗ್ಗಡೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು - ಅಮೃತ್ ಶೆಣೈ
21/07/2025 05:03 AM
ಉಡುಪಿ: ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಶವಗಳನ್ನು ಹೂತು ಹಾಕಲಾಗಿದೆ ಎಂಬ ಎಂಬ ಆರೋಪಕ್ಕೆ ಸಂಬಂಧಿಸಿ ರಾಜ್ಯ ಸರಕಾರ S I T ತನಿಖೆಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ತನಿಖಾ ವರದಿ ಬರುವ ತನಕ ವೀರೇಂದ್ರ ಹೆಗ್ಗಡೆಯವರು ರಾಜ್ಯ ಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ,ಹೋರಾಟಗಾರ ಅಮೃತ್ ಶೆಣೈ ಒತ್ತಾಯ ಮಾಡಿದ್ದಾರೆ.
ಧರ್ಮಸ್ಥಳ ಕೆಲಕಾಲದಿಂದ ಸೌಜನ್ಯಾ ಅತ್ಯಾಚಾರ ವಿಚಾರವಾಗಿ ಚರ್ಚೆಯಲ್ಲಿತ್ತು. ಈಗ ದೇಶದಾದ್ಯಂತ ಈ ಆರೋಪಗಳ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳ ಮುಖಾಂತರ ಚರ್ಚೆ ಆಗುವಾಗ ಹೆಗ್ಗಡೆಯವರು ಅಧಿಕಾರ ತ್ಯಜಿಸಿ ,ತಾನು ತನ್ನ ಅಧಿಕಾರದ ಪ್ರಭಾವವನ್ನು ತನಿಖೆ ಮೇಲೆ ಬಳಸಲಿಲ್ಲ ಎಂಬುದನ್ನು ಮಾದರಿ ವ್ಯಕ್ತಿತ್ವವಾಗಿ ತೋರಿಸಿಕೊಡಬೇಕು ಎಂದು ಅಮೃತ್ ಶೆಣೈ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.