ಬೆಂಗಳೂರು: ಕೆಂಪುಕಲ್ಲು, ಮರಳು ಸಮಸ್ಯೆ  ಕುರಿತು ಕರಾವಳಿಯ ಬಿಜೆಪಿ ಶಾಸಕರುಗಳಿಂದ ಸಿಎಂಗೆ ಮನವಿ

ಬೆಂಗಳೂರು: ಕೆಂಪುಕಲ್ಲು, ಮರಳು ಸಮಸ್ಯೆ ಕುರಿತು ಕರಾವಳಿಯ ಬಿಜೆಪಿ ಶಾಸಕರುಗಳಿಂದ ಸಿಎಂಗೆ ಮನವಿ

 


ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಮಸ್ಯೆಯಾಗಿ ಜನರನ್ನು ಕಾಡುತ್ತಿರುವ ಕೆಂಪುಕಲ್ಲು ಹಾಗೂ ಮರಳನ್ನು ಪೂರೈಸುವ ಬಗ್ಗೆ ಜಿಲ್ಲೆಯ ಸಂಸದರು, ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಮನೆ ಮುಂಗಟ್ಟುಗಳನ್ನು ಕಟ್ಟುತ್ತಿರುವ ಜನರಿಗೆ ಕೆಂಪು ಕಲ್ಲು ಹಾಗೂ ಮರಳು ದೊರಕುವುದು ಅತ್ಯಂತ ದುರ್ಲಭವಾಗಿದೆ.ಹೀಗಾಗಿ  ಈ ಸಮಸ್ಯೆಯನ್ನು ಪರಿಹರಿಸಿ ಮನೆ ಕಟ್ಟಿಸಲು ಅಗತ್ಯವಾಗಿ ಬೇಕಾಗುವ ಸಲಕರಣೆಗಳನ್ನು ತಕ್ಷಣ ದೊರಕುವಂತೆ ಮಾಡಿ ಮನೆ ಇತ್ಯಾದಿಗಳ ರಚನೆಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಯಿತು. ನಿಯೋಗದಲ್ಲಿ ಸಂಸದ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹಾಗೂ ಇತರ ಮುಖಂಡರು ಈ ಸಂದರ್ಭದಲ್ಲಿದ್ದರು.

Ads on article

Advertise in articles 1

advertising articles 2

Advertise under the article